ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ವಜ್ರ ಹಾಗೂ ಚಿನ್ನಾಭರಣಕ್ಕೆ ಕನ್ನ ಹಾಕಿದ್ದ ತೆಲಂಗಾಣದ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದುರ್ಗಾ ಅನ್ನಾರೆಡ್ಡಿ(40) ಮತ್ತು ಆಕೆಯ ಸಹೋದರಿಯ ಪತಿ ವೆಂಕಟೇಶ್ ರಾವ್(44) ಬಂಧಿತರು.

ಆರೋಪಿಗಳಿಂದ ₹22 ಲಕ್ಷ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ, ಮೊಬೈಲ್, ವಾಚ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಜಯನಗರದ 1ನೇ ಬ್ಲಾಕ್ನಲ್ಲಿ ನೆಲಸಿರುವ ವೈದ್ಯೆಯ ಮನೆಯಲ್ಲಿ ಇತ್ತೀಚೆಗೆ ಕಳ್ಳತನ ನಡೆದಿತ್ತು. ವೈದ್ಯೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಎರಡು ವರ್ಷಗಳ ಹಿಂದೆ ಏಜೆನ್ಸಿಯ ಮೂಲಕ ತೆಲಂಗಾಣದ ದುರ್ಗಾಳನ್ನು ಮನೆ ಕೆಲಸಕ್ಕೆ ದೂರುದಾರೆ ನೇಮಿಸಿಕೊಂಡಿದ್ದರು. ಈ ಮಧ್ಯೆ ವೈದ್ಯೆ ಅನಾರೋಗ್ಯಕ್ಕೀಡಾಗಿದ್ದರಿಂದ ಅಡುಗೆ ಹಾಗೂ ಮನೆಯ ಎಲ್ಲಾ ಕೆಲಸಗಳನ್ನು ದುರ್ಗಾ ನಿರ್ವಹಣೆ ಮಾಡುತ್ತಿದ್ದಳು. ಮಲಗುವ ಕೋಣೆಯೂ ಸೇರಿ ಎಲ್ಲೆಡೆ ಓಡಾಡುತ್ತಿದ್ದಳು. ಈ ವೇಳೆ ಕಪಾಟುವಿನಲ್ಲಿದ್ದ ಚಿನ್ನಾಭರಣಗಳನ್ನು ಆಕೆ ಆಗಾಗ್ಗೆ ಕಳವು ಮಾಡುತ್ತಿದ್ದಳು’ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

‘ಜುಲೈ 28ರಂದು ಮನೆಯಿಂದ ಆರೋಪಿ ಮಹಿಳೆ ಪರಾರಿ ಆಗಿದ್ದಳು. ಕಪಾಟು ಪರಿಶೀಲಿಸಿದಾಗ ವಜ್ರ, ಚಿನ್ನ ಹಾಗೂ ಬೆಳ್ಳಿಯ ವಸ್ತುಗಳು, ಮೊಬೈಲ್ಗಳು, ಬೆಲೆಬಾಳುವ ವಾಚ್ಗಳು ಕಾಣಿಸುತ್ತಿರಲಿಲ್ಲ. ಬಳಿಕ ಠಾಣೆಗೆ ಬಂದು ದೂರು ನೀಡಿದರು’ ಎಂದು ಪೊಲೀಸರು ತಿಳಿಸಿದರು.

ತೆಲಂಗಾಣದ ನ್ಯೂ ರಂಗಪುರ ಗ್ರಾಮದಲ್ಲಿರುವ ಸಹೋದರಿ ಮನೆಯಲ್ಲಿ ದುರ್ಗಾ ಆಶ್ರಯ ಪಡೆದುಕೊಂಡಿರುವುದು ಗೊತ್ತಾಗಿತ್ತು. ಅಲ್ಲಿಗೆ ತೆರಳಿದ ವಿಶೇಷ ಪೊಲೀಸ್ ತಂಡವು ಆಕೆಯನ್ನು ಪತ್ತೆಹಚ್ಚಿ ನಗರಕ್ಕೆ ಕರೆತರಲು ಯಶಸ್ವಿಯಾಗಿದೆ ಎಂದು ಪೊಲೀಸರು ಹೇಳಿದರು.

ಚಿನ್ನ ಮಾರಿದ್ದ ಸಹೋದರಿ ಪತಿ

ಕದ್ದ ಚಿನ್ನವನ್ನು ತನ್ನ ಸಹೋದರಿಯ ಪತಿ ವೆಂಕಟೇಶ್ ರಾವ್ ಮೂಲಕ ಮಾರಾಟ ಮಾಡಿಸಿರುವುದಾಗಿ ದುರ್ಗಾ ಅನ್ನಾರೆಡ್ಡಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ. ಆಭರಣಗಳನ್ನು ಪಡೆದು ಮಾರಾಟ ಮಾಡಿದ್ದ ವೆಂಕಟೇಶ್ನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.