ಭಾನುವಾರ, 17 ಆಗಸ್ಟ್ 2025
×
ADVERTISEMENT
ADVERTISEMENT

Bengaluru Fire Accident: ಅಗ್ನಿ ದುರಂತದಲ್ಲಿ ಬೆಂದ ಕುಟುಂಬ

Published : 16 ಆಗಸ್ಟ್ 2025, 23:52 IST
Last Updated : 16 ಆಗಸ್ಟ್ 2025, 23:52 IST
ಫಾಲೋ ಮಾಡಿ
Comments
ಬೆಂಗಳೂರಿನ ನಗರ್ತಪೇಟೆಯಲ್ಲಿ ಸಂಭವಿಸಿದ ಬೆಂಕಿ ದುರಂತ  
ಬೆಂಗಳೂರಿನ ನಗರ್ತಪೇಟೆಯಲ್ಲಿ ಸಂಭವಿಸಿದ ಬೆಂಕಿ ದುರಂತ  
ಮೃತಪಟ್ಟ ಮದನ್‌ ಕುಮಾರ್ 
ಮೃತಪಟ್ಟ ಮದನ್‌ ಕುಮಾರ್ 
ಮೃತಪಟ್ಟ ತಾಯಿ ಸಂಗೀತಾ ಹಾಗೂ ಮಗು
ಮೃತಪಟ್ಟ ತಾಯಿ ಸಂಗೀತಾ ಹಾಗೂ ಮಗು
ಶ್ರೀರಾಮ ಕಾಲೊನಿಯಲ್ಲಿ ಸಂಭವಿಸಿದ ದುರಂತದಲ್ಲಿ ಸಂತ್ರಸ್ತರಾದ ಕುಟುಂಬವರಿಗೆ ಸಚಿವ ಜಮೀರ್‌ ಅಹಮದ್‌ ಖಾನ್ ಅವರು ಪರಿಹಾರ ವಿತರಣೆ ಮಾಡಿದರು 
ಶ್ರೀರಾಮ ಕಾಲೊನಿಯಲ್ಲಿ ಸಂಭವಿಸಿದ ದುರಂತದಲ್ಲಿ ಸಂತ್ರಸ್ತರಾದ ಕುಟುಂಬವರಿಗೆ ಸಚಿವ ಜಮೀರ್‌ ಅಹಮದ್‌ ಖಾನ್ ಅವರು ಪರಿಹಾರ ವಿತರಣೆ ಮಾಡಿದರು 
ನೆಲ ಅಂತಸ್ತಿನಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ತುಂಬಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಿತ್ತು. ಹಾಗಾಗಿ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು
ವಂಶಿಕೃಷ್ಣ ಜಂಟಿ ಪೊಲೀಸ್ ಕಮಿಷನರ್‌ ಪೂರ್ವ ವಿಭಾಗ
ವೈಯಕ್ತಿಕ ಪರಿಹಾರ ನೀಡಿದ ಸಚಿವ ಜಮೀರ್
   ಚಿನ್ನಯ್ಯನಪಾಳ್ಯ ಹಾಗೂ ನಗರ್ತಪೇಟೆಯಲ್ಲಿ ಸಂಭವಿಸಿದ ಅವಘಡ ಸ್ಥಳಕ್ಕೆ ಭೇಟಿ ನೀಡಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ನೀಡಿದರು. ಚಿನ್ನಯ್ಯನಪಾಳ್ಯದಲ್ಲಿ ಮೃತಪಟ್ಟ ಮುಬಾರಕ್‌ ಕುಟುಂಬಕ್ಕೆ ₹5 ಲಕ್ಷ ಪರಿಹಾರ ವಿತರಣೆ ಮಾಡಿದರು. ಗಾಯಾಳುಗಳಿಗೆ ಪರಿಹಾರ ವಿತರಿಸಿದರು. ‌ ನಗರ್ತಪೇಟೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟ ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಸುರಕ್ಷತಾ ಕ್ರಮಗಳೇ ಇಲ್ಲ
ಕಿಷ್ಕಿಂಧೆ ಪ್ರದೇಶದಲ್ಲಿ ಬೃಹತ್‌ ಕಟ್ಟಡ ನಿರ್ಮಿಸಲಾಗಿದೆ. ಅನಾಹುತ ಸಂಭವಿಸಿದರೆ ತುರ್ತು ಸೇವಾ ಸಿಬ್ಬಂದಿ ವಾಹನಗಳೂ ತೆರಳುವುದು ಆಗುವುದಿಲ್ಲ. ಕಟ್ಟಡದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಮೇಲಿನ ಮಹಡಿಗೆ ತೆರಳವುದಕ್ಕೂ ಸೂಕ್ತವಾದ ವ್ಯವಸ್ಥೆ ಕಟ್ಟಡದಲ್ಲಿ ಇರಲಿಲ್ಲ ಎಂದು ಕಾರ್ಯಾಚರಣೆ ಸಿಬ್ಬಂದಿ ಹೇಳಿದರು.
ಕಟ್ಟಡ ಮಾಲೀಕರ ವಿರುದ್ಧ ಎಫ್‌ಐಆರ್‌
ನಿರ್ಲಕ್ಷ್ಯದ ಆರೋಪದ ಅಡಿ ಕಟ್ಟಡದ ಮಾಲೀಕರಾದ ಬಾಲಕೃಷ್ಣ ಶೆಟ್ಟಿ ಹಾಗೂ ಸಂದೀಪ್‌ ಶೆಟ್ಟಿ ವಿರುದ್ಧ ಹಲಸೂರು ಗೇಟ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬೆಂಕಿ ನಂದಿಸಲು ಯಾವುದೇ ಸಲಕರಣೆಗಳನ್ನೂ ಇಟ್ಟಿಲ್ಲ. ಮುಂಜಾಗ್ರತಾ ಕ್ರಮ ಅನುಸರಿಸದೇ ಐವರ ಸಾವಿಗೆ ಮಾಲೀಕರು ಕಾರಣವಾಗಿದ್ದಾರೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT