ಬೆಂಗಳೂರು: ನಗರದ ವಿವಿಧೆಡೆ ಸೋಮವಾರ ಭಾರಿ ಮಳೆಯಾಗಿದೆ. ಕೆಲವೆಡೆ ನೀರು ಹರಿದು ಹೋಗಲು ಸರಿಯಾದ ಚರಂಡಿ ಇಲ್ಲದೆ ರಸ್ತೆಗಳು ಕಾಲುವೆಯಂತಾದವು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿತು.

ಬಿನ್ನಿಮಿಲ್ ಮುಖ್ಯ ರಸ್ತೆ, ಕೆ.ಆರ್. ವೃತ್ತದ ಕೆಳಸೇತುವೆ, ಬನ್ನೇರುಘಟ್ಟ ಮುಖ್ಯರಸ್ತೆ, ದರ್ಗಾ ರಸ್ತೆ ಕಡೆಯಿಂದ ಸಿಲ್ಕ್ ಬೋರ್ಡ್ ಕಡೆಗೆ, ಬಿಳೇಕಹಳ್ಳಿ ಕಡೆಯಿಂದ ಜಿ.ಡಿ. ಮರ ಕಡೆಗೆ, ವೀರಸಂದ್ರ ಜಂಕ್ಷನ್ ಕಡೆಯಿಂದ ಹೊಸೂರು ರಸ್ತೆ ಕಡೆಗೆ, ಜಯದೇವ ಯು ಟರ್ನ್, ವರ್ತೂರು ಕೋಡಿ ಬಸ್ ನಿಲ್ದಾಣ ಕಡೆಯಿಂದ ವೈಟ್ಫೀಲ್ಡ್ ಕಡೆಗೆ, ವರ್ತೂರು ಕೋಡಿಯಿಂದ ತೂಬರಹಳ್ಳಿ ಕಡೆಗೆ ಸಾಗುವ ರಸ್ತೆಗಳು ನೀರಿನಿಂದ ಆವೃತ್ತವಾದವು.

ದೊಡ್ಡನೆಕ್ಕುಂದಿ ಹೊರ ವರ್ತುಲ ರಸ್ತೆ, ವರ್ತೂರು ಪಿಎಸ್ ಕಡೆಯಿಂದ ವರ್ತೂರು ಕಾಲೇಜು ಕಡೆಗಿನ ರಸ್ತೆ, ಉತ್ತರಹಳ್ಳಿ ವೃತ್ತ, ಮೆಜೆಸ್ಟಿಕ್ ಬಸ್ ನಿಲ್ದಾಣ, ಎಸ್ಜೆಪಿ ರಸ್ತೆ, ರೂಪೇನ ಅಗ್ರಹಾರ ಕಡೆಯಿಂದ ಬೊಮ್ಮನಹಳ್ಳಿ ಕಡೆಗೆ ಸಾಗುವ ರಸ್ತೆ, ರೂಬಿ2 ಜಂಕ್ಷನ್, ಬೆಳ್ಳಂದೂರು ಡೌನ್ ರ್ಯಾಂಪ್, ಬೆಳ್ಳಂದೂರು ಇಕೋಸ್ಪೇಸ್, ಕ್ವೀನ್ಸ್ ಜಂಕ್ಷನ್ ಕಡೆಯಿಂದ ಅನಿಲ್ ಕುಂಬ್ಳೆ ಸರ್ಕಲ್ ಕಡೆಗೆ, ಕಸ್ತೂರಿ ನಗರ ಕಡೆಯಿಂದ ರಾಮಮೂರ್ತಿ ನಗರದ ಕಡೆಗೆ, ಎಂ.ಜಿ ರಸ್ತೆ ಮೆಟ್ರೊ ನಿಲ್ದಾಣ ಸುತ್ತಮುತ್ತ, ಆರ್.ಪಿ ರಸ್ತೆ ಕಡೆಯಿಂದ ಪಿ.ಜಿ. ಹಳ್ಳಿ ಕಡೆಗೆ, ನೆಹರೂ ಕೆಳ ಸೇತುವೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ವಿದ್ಯಾಪೀಠದಲ್ಲಿ 3.5 ಸೆಂ.ಮೀ, ಕೆಂಗೇರಿಯಲ್ಲಿ 3.4, ರಾಜರಾಜೇಶ್ವರಿ ನಗರ 3.2, ಪೀಣ್ಯ ಕೈಗಾರಿಕಾ ವಲಯ 3.1, ಹಂಪಿನಗರ 3, ಬಿಳೇಕಹಳ್ಳಿ 2.7, ಕೊಟ್ಟಿಗೆಪಾಳ್ಯ 2.7, ಬಸವೇಶ್ವರನಗರ 2.7, ನಾಯಂಡಹಳ್ಳಿ 2.7, ಕೋರಮಂಗಲ 2.7, ಅರಕೆರೆ 2.6, ಅಂಜನಾಪುರ 2.5, ವನ್ನಾರಪೇಟೆ 2.4, ಹೆರೋಹಳ್ಳಿ 2.4, ಹಗದೂರು 2.4, ಹೆಮ್ಮಿಗೆಪುರ 2.4, ಮಾರತ್ಹಳ್ಳಿ 2.3, ಬೊಮ್ಮನಹಳ್ಳಿ 2.2, ನಾಗಪುರ 2.2, ಪುಟ್ಟೇನಹಳ್ಳಿ 2.1, ಮಾರುತಿ ಮಂದಿರ 2.1, ರಾಜರಾಜೇಶ್ವರಿ ನಗರ 2.1, ಬಿ.ಟಿ.ಎಂ. ಲೇಔಟ್ 2, ಎಚ್ಎಸ್ಆರ್ ಲೇಔಟ್ 2 ಹಾಗೂ ಸಂಪಿಗೆರಾಮನಗರದಲ್ಲಿ 2 ಸೆಂ.ಮೀ. ಮಳೆ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.