ಬೆಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ನಗರದ ಖಾಸಗಿ ಕಾಲೇಜೊಂದರ ವಿಭಾಗದ ಮುಖ್ಯಸ್ಥರೊಬ್ಬರನ್ನು (ಎಚ್ಒಡಿ) ಬಂಧಿಸಿದ್ದ ತಿಲಕ್ನಗರ ಪೊಲೀಸರು, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

19 ವರ್ಷದ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಕಾಲೇಜೊಂದರ ಎಚ್ಒಡಿ ಸಂಜೀವ್ ಕುಮಾರ್ ಮಂಡಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 75 ಅಡಿ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ವಿಚಾರಣೆಗೆ ಬಂದಾಗ ಆರೋಪಿಯನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿದ್ಯಾರ್ಥಿನಿ ನೀಡಿದ ದೂರಿನಲ್ಲಿ ಏನಿದೆ?: ‘ಕಾಲೇಜಿನಲ್ಲಿ ಮೂರನೇ ವರ್ಷದ ಬಿಸಿಎ ವಿದ್ಯಾರ್ಥಿನಿಯಾಗಿದ್ದು, ಸೆ.25ರಂದು ಸಂಜೀವ್ ಕುಮಾರ್ ಮಂಡಲ್ ಅವರು ಮನೆಯಲ್ಲಿ ಪತ್ನಿ ಹಾಗೂ ಮಕ್ಕಳು ಇರುವುದಾಗಿ ಹೇಳಿ ಊಟಕ್ಕೆ ಕರೆದುಕೊಂಡು ಹೋಗಿದ್ದರು. ಜಯನಗರದ 9ನೇ ಕಾಲೊನಿಯ ಕಾರ್ಪೊರೇಷನ್ ಕಾಲೊನಿಯಲ್ಲಿ ಅವರ ಮನೆ ಇದೆ. ಮನೆಗೆ ಹೋದ ಬಳಿಕ ಮನೆಯಲ್ಲಿ ಯಾರೂ ಇಲ್ಲ ಎಂಬುದಾಗಿ ತಿಳಿಸಿದ್ದರು. ಮೊದಲು ಸಹಜವಾಗಿಯೇ ಇದ್ದರು. ಕುಡಿಯಲು, ತಿನ್ನಲು ಏನಾದರೂ ಬೇಕಾ ಎಂದು ಕೇಳಿದ್ದರು. ಆಗ ನಾನು ಗಾಬರಿಯಿಂದ ಬೇಡವೆಂದು ಹೇಳಿದ್ದೆ’ ಎಂದು ವಿದ್ಯಾರ್ಥಿನಿ ನೀಡಿರುವ ದೂರು ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

‘ಅವರ ಮನೆಯ ಸೋಫಾದಲ್ಲಿ ನಾನು ಕುಳಿತಿದ್ದೆ. ಆಗ ಸಂಜೀವ್ ಕುಮಾರ್ ಅವರು ನನ್ನ ಹತ್ತಿರ ಬಂದು, ಪಕ್ಕದಲ್ಲಿ ಕುಳಿತು ಹಾಜರಾತಿ ಕಡಿಮೆಯಿದೆ ಎಂದು ಹೇಳಿ ಭುಜದ ಮೇಲೆ ಕೈಹಾಕಿ ಅನುಚಿತವಾಗಿ ವರ್ತಿಸುತ್ತಾರೆ. ಅದಕ್ಕೆ ವಿರೋಧಿಸಿದಾಗ, ನಿನ್ನ ಹಾಜರಾತಿ ಕಡಿಮೆಯಿದ್ದು, ಹೆಚ್ಚು ಮಾಡುತ್ತೇನೆ. ಅಂಕಗಳನ್ನೂ ಹೆಚ್ಚಿಸುತ್ತೇನೆ ಎಂದು ಹೇಳಿ ಕೂದಲು ಸವರುತ್ತಾ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅಷ್ಟರಲ್ಲಿ ಸ್ನೇಹಿತರು ಕರೆ ಮಾಡಿದ್ದರಿಂದ ಆಗ ತುರ್ತು ಕೆಲಸ ಇರುವುದಾಗಿ ಹೇಳಿ ಅಲ್ಲಿಂದ ಬಂದಿದ್ದೆ’ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.