ಬೆಂಗಳೂರು: ಕೋವಿಡ್ ಸಮಯದಲ್ಲಿ ಚಾಲ್ತಿಗೆ ಬಂದ ಮನೆಯಿಂದ ಕೆಲಸ (ವರ್ಕ್ ಫ್ರಂ ಹೋಮ್) ವ್ಯವಸ್ಥೆ ಹಾಗೂ ಹೈಬ್ರೀಡ್ ಮಾದರಿಗೆ ಕೊನೆ ಹಾಡಲು ಕಂಪನಿಗಳು ಮುಂದಾಗಿರುವುದರಿಂದಾಗಿ ಅಕ್ಟೋಬರ್ನಿಂದ ಹೊರ ವರ್ತುಲ ರಸ್ತೆಯಲ್ಲಿ (ಒಆರ್ಆರ್) ಶೇಕಡ 10ರಿಂದ 15ರಷ್ಟು ವಾಹನ ದಟ್ಟಣೆ ಹೆಚ್ಚಾಗಲಿದೆ.

ಸಂಚಾರ ದಟ್ಟಣೆಯ ಕಾರಣಕ್ಕೆ ಸುದ್ದಿಯಲ್ಲಿರುವ ಒಆರ್ಆರ್ ಪ್ರದೇಶದ ವ್ಯಾಪ್ತಿಯಲ್ಲಿರುವ ಸಾಫ್ಟ್ವೇರ್ ಕಂಪನಿಗಳಲ್ಲಿ ಅಂದಾಜು 8 ಲಕ್ಷ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವು ಕಂಪನಿಗಳು ಹೈಬ್ರೀಡ್ ಮಾದರಿ ಅಳವಡಿಸಿಕೊಂಡಿವೆ. ಅಂದರೆ ವಾರದಲ್ಲಿ ಎರಡು ದಿನ ಮನೆಯಿಂದ ಮತ್ತು ಮೂರು ದಿನ ಕಚೇರಿಯಿಂದ ಕೆಲಸ ನಿರ್ವಹಿಸುವುದು. ಸಾಮಾನ್ಯವಾಗಿ ಬುಧವಾರ ಮತ್ತು ಗುರುವಾರ ಅತಿ ಹೆಚ್ಚು ವಾಹನ ದಟ್ಟಣೆ ಇರುತ್ತದೆ.

ಕಂಪನಿಯ ಪ್ರಗತಿಯ ದೃಷ್ಟಿಯಿಂದ ಸೆಪ್ಟೆಂಬರ್ನಿಂದಲೇ ಕಚೇರಿಗೆ ಬರುವಂತೆ ಹಾಗೂ ಕೆಲ ಕಂಪನಿಗಳು ಅಕ್ಟೋಬರ್ನಿಂದ ಬರುವಂತೆ ಉದ್ಯೋಗಿಗಳಿಗೆ ಸೂಚನೆ ನೀಡಿವೆ. ಕೆಲ ವಾರಗಳಿಂದ ಈ ಬಗ್ಗೆ ಚರ್ಚೆ ನಡೆದಿದ್ದು, ಉದ್ಯೋಗಿಗಳಿಗೆ ಇ– ಮೇಲ್ ಮೂಲಕ ತಿಳಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.