ಮಂಗಳವಾರ, ಫೆಬ್ರವರಿ 7, 2023
27 °C

ಅ.16ರಂದು ಬೆಂಗಳೂರು ಮ್ಯಾರಥಾನ್‌: 11 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀರಾಮ್ ಪ್ರಾಪರ್ಟೀಸ್ ಪ್ರಾಯೋಜಿಸುವ ಬೆಂಗಳೂರು ಮ್ಯಾರಥಾನ್ ಇದೇ ಅ.16ರಂದು ನಡೆಯಲಿದ್ದು, 11 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ಕುರಿತು ಗುರುವಾರ ಎನ್‌ಬಿಎ ಸ್ಪೋರ್ಟ್ಸ್ ವರ್ಚುವಲ್ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

ಒಂಬತ್ತನೇ ಆವೃತ್ತಿಯ ಮ್ಯಾರಥಾನ್‌ಗೆ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಶ್ರೀರಾಮ್ ಪ್ರಾಪರ್ಟೀಸ್ ಲಿಮಿಟೆಡ್‌ನ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುರಳಿ ಎಂ. ಮತ್ತು ನಟ ಧೀರೇನ್ ರಾಮ್‌ಕುಮಾರ್ ಅವರು ಚಾಲನೆ ನೀಡಲಿದ್ದಾರೆ.

ಮ್ಯಾರಥಾನ್‌ ಬೆಳಿಗ್ಗೆ 4 ಗಂಟೆಗೆ, ಹಾಫ್‌ ಮ್ಯಾರಥಾನ್‌ 6.15ರಿಂದ ನಡೆಯಲಿದೆ. ವಿಶೇಷ ಉದ್ದೇಶಕ್ಕಾಗಿ ನಡೆಯಲಿರುವ 10ಕೆ ಮತ್ತು 5ಕೆ ಓಟಗಳು ಕ್ರಮವಾಗಿ  ಬೆಳಿಗ್ಗೆ 7.45 ಮತ್ತು 8.15ರಿಂದ ಆರಂಭವಾಗಲಿವೆ.

‘10ಕೆ ಓಟಕ್ಕೆ ನೋಂದಾಯಿಸುವ ಪ್ರತಿಯೊಬ್ಬರ ಶುಲ್ಕದಲ್ಲಿ ₹ 1 ಸಾವಿರ ಅನ್ನು ಶ್ರೀ ಶಂಕರ ಕ್ಯಾನ್ಸರ್ ಫೌಂಡೇಷನ್‌ಗೆ ದಾನವಾಗಿ ನೀಡಲಾಗುತ್ತದೆ. ಕ್ಯಾನ್ಸರ್ ರೋಗಿಗಳಿಗಾಗಿ ಹಣವನ್ನು ಸಂಗ್ರಹಿಸಲು ಮಾತ್ರವಲ್ಲದೆ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ಉಪಕ್ರಮ ನಡೆಯುತ್ತಿದೆ‘ ಎಂದು ಧೀರೇನ್ ರಾಮ್‌ಕುಮಾರ್ ಹೇಳಿದರು. 

ಅರ್ಜುನ ಪ್ರಶಸ್ತಿ ಪುರಸ್ಕೃತ, ಮಾಜಿ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರು ಈ ಸಂದರ್ಭದಲ್ಲಿ ಮ್ಯಾರಥಾನ್‌ ಟಿ-ಶರ್ಟ್ ಮತ್ತು ಪದಕಗಳನ್ನು ಅನಾವರಣಗೊಳಿಸಿದರು.

https://www.bengalurumarathon.in ಮೂಲಕ ಮ್ಯಾರಥಾನ್‌ಗೆ ನೋಂದಾಯಿಸಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು