ಬೆಂಗಳೂರು: ನಮ್ಮ ಮೆಟ್ರೊ ರೈಲಿನಲ್ಲಿ ಹೃದಯ ಸಾಗಾಟ ಮಾಡಲಾಗಿದೆ. ಇದರೊಂದಿಗೆ ಮೆಟ್ರೊದಲ್ಲಿ ಎರಡನೇ ಬಾರಿ ಯಶಸ್ವಿಯಾಗಿ ಅಂಗಾಂಗ ಸಾಗಾಟ ಮಾಡಿದಂತಾಗಿದೆ.

ಯಶವಂತಪುರ ಸ್ಪರ್ಶ್ ಆಸ್ಪತ್ರೆಯಿಂದ ಶೇಷಾದ್ರಿಪುರ ಬಳಿಯ ಅಪೊಲೋ ಆಸ್ಪತ್ರೆಗೆ ಗುರುವಾರ ರಾತ್ರಿ ಹೃದಯವನ್ನು ಸಾಗಿಸಬೇಕಿತ್ತು. ಸ್ಪರ್ಶ್ ಆಸ್ಪತ್ರೆಯಿಂದ ಯಶವಂತಪುರ ಮೆಟ್ರೊ ಸ್ಟೇಷನ್ವರೆಗೆ ಆಂಬುಲೆನ್ಸ್ ಮೂಲಕ ಹೃದಯವನ್ನು ತರಲಾಯಿತು. ಅಲ್ಲಿಂದ ಸಂಪಿಗೆ ರಸ್ತೆ ಮೆಟ್ರೊ ನಿಲ್ದಾಣದವರೆಗೆ ಮೆಟ್ರೊ ರೈಲಿನಲ್ಲಿ ಸಾಗಿಸಲಾಯಿತು. ಸಂಪಿಗೆ ರಸ್ತೆಯಿಂದ ಅಪೊಲೋ ಆಸ್ಪತ್ರೆಗೆ ಮತ್ತೆ ಆಂಬುಲೆನ್ಸ್ನಲ್ಲಿ ಒಯ್ಯಲಾಯಿತು.

ಮೆಟ್ರೊ ರೈಲಿನ ಒಂದು ಕೋಚ್ ಅನ್ನು ಹೃದಯ ಸಾಗಿಸಲು ಮೀಸಲಿಡಲಾಗಿತ್ತು. ಎಂದಿನಂತೆ ಸಂಚಾರ ಮಾಡುವ ಪ್ರಯಾಣಿಕರ ರೈಲಿನಲ್ಲೇ ಹೃದಯವನ್ನು ಸಾಗಿಸಲಾಗಿದೆ. ರಾತ್ರಿ 11.1 ಕ್ಕೆ ಯಶವಂತಪುರದಿಂದ ಹೊರಟ ರೈಲು 11.21ಕ್ಕೆ ಸಂಪಿಗೆ ರಸ್ತೆ ಮೆಟ್ರೊ ನಿಲ್ದಾಣ ತಲುಪಿದೆ. ಒಟ್ಟು ಏಳು ನಿಲ್ದಾಣಗಳನ್ನು ದಾಟಲು ಕೇವಲ 20 ನಿಮಿಷಗಳನ್ನು ತೆಗೆದುಕೊಂಡಿದೆ. ವೈದ್ಯಕೀಯ ತಂಡಕ್ಕೆ ಬಿಎಂಆರ್ಸಿಎಲ್ ಸಹಾಯಕ ಭದ್ರತಾ ಅಧಿಕಾರಿ ಹೊನ್ನೇಗೌಡ ನೇತೃತ್ವದಲ್ಲಿ ಮೆಟ್ರೊ ಸಿಬ್ಬಂದಿಯ ತಂಡವು ತ್ವರಿತ ಸಹಕಾರವನ್ನು ನೀಡಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.