ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Metro | ಮೆಟ್ರೊ ನೀಲಿ ಮಾರ್ಗ: ವಯಡಕ್ಟ್ ಜೋಡಣೆ

ನಮ್ಮ ಮೆಟ್ರೊ: ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿಗೆ ವೇಗ
Last Updated 4 ಮಾರ್ಚ್ 2023, 22:45 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೊ ರೈಲು ಮಾರ್ಗದ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಪಿಲ್ಲರ್‌ಗಳ ಮೇಲೆ ವಯಡಕ್ಟ್ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ.

ಅತಿ ಹೆಚ್ಚು ಪ್ರಯಾಣಿಕರ ಒತ್ತಡ ಇರುವ ದೇಶದ ಮೂರನೇವಿಮಾನ ನಿಲ್ದಾಣ ಇದಾಗಿದೆ. ಇಲ್ಲಿಗೆ ಮೆಟ್ರೊ ರೈಲು ಮಾರ್ಗ ಕಲ್ಪಿಸುವ ಕಾಮಗಾರಿ ಈಗ ವೇಗ ಪಡೆದುಕೊಂಡಿದೆ. ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರ ತನಕ(ಹಂತ –2ಎ) ಮತ್ತು ಕೆ.ಆರ್‌.ಪುರದಿಂದ ವಿಮಾನ ನಿಲ್ದಾಣದ ತನಕ(ಹಂತ–2ಬಿ) ಮತ್ತೊಂದು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಹಂತ–2ಎ ಕಾಮಗಾರಿ 2021ರ ಆಗಸ್ಟ್‌ನಲ್ಲಿ ಆರಂಭವಾಗಿದ್ದು, ಹಂತ–2ಬಿ ಕಾಮಗಾರಿ ಅದಕ್ಕಿಂತ ಆರು ತಿಂಗಳು ವಿಳಂಬವಾಗಿ ಆರಂಭವಾಗಿದೆ. ಹಂತ–2ಎ ಕಾಮಗಾರಿಯನ್ನು ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಂಪನಿ ನಿರ್ವಹಿಸುತ್ತಿದ್ದು, ಈಗ ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅವುಗಳ ಮೇಲೆ ವಯಡಕ್ಟ್ ಅಳವಡಿಕೆಯಾಗುತ್ತಿವೆ.

ಮಹದೇವಪುರದ ಬಳಿ ರಸ್ತೆ ಮೇಲ್ಸೇತುವೆ ಮಧ್ಯದಲ್ಲಿ ಹಾದು ಹೋಗುತ್ತಿರುವ ಮೆಟ್ರೊ ಮಾರ್ಗಕ್ಕೆ ಸ್ಪ್ಲಿಟ್ ಫ್ಲೈಓವರ್‌
ನಿರ್ಮಿಸಲಾಗುತ್ತಿದೆ.

ಈ ಜಾಗದಲ್ಲಿ ಮಾತ್ರಇನ್ನೂ ವಯಡಕ್ಟ್ ನಿರ್ಮಾಣಕ್ಕೆ ಕಾಲಾವಕಾಶ ಬೇಕಾಗಲಿದೆ. ಉಳಿದೆಡೆ ಪಿಲ್ಲರ್‌ಗಳ ಮೇಲೆ ಕ್ಯಾಪ್‌ಗಳನ್ನು ಅಳವಡಿಸಿ ಅವುಗಳ ಮೇಲೆ ವಯಡಕ್ಟ್ ಜೋಡಿಸಲಾಗುತ್ತಿದೆ.

ವಯಡಕ್ಟ್ ಕಾಮಗಾರಿ ಒಮ್ಮೆ ಪೂರ್ಣಗೊಂಡರೆ ಹಳಿ ಜೋಡಣೆ ಕಾರ್ಯ ಆರಂಭವಾಗಲಿದೆ. ಇದರ ನಡುವೆ ನಿಲ್ದಾಣಗಳ ನಿರ್ಮಾಣ ಆಗಬೇಕಿದೆ. ಈ ಎಲ್ಲಾ ಕಾಮಗಾರಿ ಪೂರ್ಣಕ್ಕೆ ಇನ್ನು ಸಾಕಷ್ಟು ಸಮಯ ಬೇಕಾಗಲಿದೆ.

ಒಟ್ಟಾರೆಸಿಲ್ಕ್‌ಬೋರ್ಡ್‌–ಕೆ.ಆರ್‌.ಪುರ ಮಾರ್ಗದ ಕಾಮಗಾರಿ 2024ರ ಕೊನೆಯಲ್ಲಿಪೂರ್ಣಗೊಳ್ಳಲಿದ್ದು, ಕೆ.ಆರ್.ಪುರ–ವಿಮಾನ ನಿಲ್ದಾಣ ಮಾರ್ಗದಕಾಮಗಾರಿ 2025ರಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT