ಬೆಂಗಳೂರು: ವಿಜಯ ದಶಮಿ ದಿನವಾದ ಗುರುವಾರ ನಗರದ ವಿವಿಧೆಡೆ ಮಳೆಯ ಸಿಂಚನವಾಯಿತು.

ಕೆಲ ಹೊತ್ತು ಬಿರುಸಿನಿಂದ ಮಳೆ ಸುರಿಯಿತು. ಹಬ್ಬದ ಸಂಭ್ರಮ ಮುಗಿಸಿ ಸಂಜೆ ಹೊತ್ತಿಗೆ ಹೊರಗೆ ಬಂದವರನ್ನು ತೋಯಿಸಿತು.

ಗರುಡಾ ಮಾಲ್ ಬಳಿ ನೀರು ನಿಂತಿದ್ದರಿಂದ ಸೇಂಟ್ ಪ್ಯಾಟ್ರಿಕ್ ಚರ್ಚ್ ಕಡೆಗೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಬಿಳೇಕಹಳ್ಳಿ ಕಡೆಯಿಂದ ವೇಗಾ ಸಿಟಿ ಮಾಲ್ ಕಡೆಗೆ, ಸಿಂಧೂರ್ ಕಡೆಯಿಂದ ಜೆ.ಪಿ ನಗರದ 37ನೇ ಮುಖ್ಯ ರಸ್ತೆ ಕಡೆಗೆ ಹೋಗುವಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತಡೆಯಾಯಿತು.

ಮಳೆ ವಿವರ: ವಿದ್ಯಾಪೀಠ 2.9 ಸೆಂ.ಮೀ, ರಾಜರಾಜೇಶ್ವರಿ ನಗರ 2.3 ಸೆಂ.ಮೀ, ಬಿಳೇಕಹಳ್ಳಿ 2.2 ಸೆಂ.ಮೀ, ವನ್ನಾರ್ಪೇಟೆ 2.2 ಸೆಂ.ಮೀ, ಕೆಂಗೇರಿ 1.8 ಸೆಂ.ಮೀ, ಎಚ್ಎಎಲ್ ವಿಮಾನ ನಿಲ್ದಾಣ 1.8 ಸೆಂ.ಮೀ, ಹಂಪಿನಗರ 1.8 ಸೆಂ.ಮೀ, ಬೊಮ್ಮನಹಳ್ಳಿ 1.5 ಸೆಂ.ಮೀ, ನಾಯಂಡಹಳ್ಳಿ 1.4 ಸೆಂ.ಮೀ, ವಿ.ವಿ ಪುರ 1.4 ಸೆಂ.ಮೀ, ರಾಜರಾಜೇಶ್ವರಿನಗರ 1.3 ಸೆಂ.ಮೀ, ಮಾರತ್ಹಳ್ಳಿ 1.2 ಸೆಂ.ಮೀ, ಎಚ್ಎಸ್ಆರ್ ಲೇಔಟ್ 1.1 ಸೆಂ.ಮೀ, ಕೋರಮಂಗಲ 1 ಸೆಂ.ಮೀ. ಮಳೆ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.