‘ನಮ್ಮ ಸರ್ಕಾರವು ಬೆಂಗಳೂರಿನ ನಿವಾಸಿಗಳ ಆಸ್ತಿ ರಕ್ಷಣೆಯ ದಾಖಲೆ ಒದಗಿಸುವ ಆರನೇ ಗ್ಯಾರಂಟಿಯನ್ನು ನೀಡಿದೆ. ಗ್ರಾಮೀಣ ಭಾಗದಲ್ಲಿ 1.10 ಕೋಟಿ ಖಾತಾ ಬದಲಾವಣೆ ಮಾಡಿದಂತೆಯೇ, ಬೆಂಗಳೂರಿನಲ್ಲೂ 28 ಲಕ್ಷ ‘ಎ’ ಖಾತಾ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ಆಸ್ತಿ ಮಾಲೀಕರು ಸಾಲ ಪಡೆಯಲು ಸಹಕಾರಿಯಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರವೂ ಮೆಚ್ಚುಗೆ ಸೂಚಿಸಿದೆ’ ಎಂದು ತಿಳಿಸಿದರು.