ಬೆಂಗಳೂರು: ಮೊಬೈಲ್ ಫೋನ್ ಬಳಕೆ, ಸಾಮಾಜಿಕ ಜಾಲತಾಣಗಳಿಂದಾಗಿ ಮಕ್ಕಳಲ್ಲಿ ಸೃಜನಶೀಲತೆ ಕಡಿಮೆ ಆಗುತ್ತಿದೆ ಎಂದು ಪಟೇಲ್ ಗುಳ್ಳಪ್ಪ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಬಿ.ಎಂ.ಪಟೇಲ್ ಪಾಂಡು ತಿಳಿಸಿದರು.

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಪಟೇಲ್ ಗುಳ್ಳಪ್ಪ ಶೈಕ್ಷಣಿಕ ಸಂಸ್ಥೆ ಆಶ್ರಯದಲ್ಲಿ ಕಲಾಗ್ರಾಮದ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಯುವ ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಟಕ, ಸಂಗೀತ, ನೃತ್ಯ ಕಲೆಯು ಸೃಜನಶೀಲತೆ ಬೆಳೆಸಿ, ಭಾಷಾ ಪ್ರಾವೀಣ್ಯತೆಯನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಕಲೆಗಳ ಬಗ್ಗೆ ಪರಿಚಯ ಮಾಡಿಸುವುದು ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ. ನಾಟಕದಲ್ಲಿ ಅಭಿನಯಿಸುತ್ತಿರುವ ವಿದ್ಯಾರ್ಥಿಗಳು ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಬೇರೆ ರಾಜ್ಯದ ಮಕ್ಕಳು ಇದ್ದು, ನಾಟಕದ ತಾಲೀಮಿನಿಂದಾಗಿ ಕನ್ನಡ ಭಾಷೆ ಹಾಗೂ ಉಚ್ಛಾರಣೆಯಲ್ಲಿ ಉತ್ತಮ ಬದಲಾವಣೆ ಕಂಡು ಬಂದಿದೆ ಎಂದರು.

ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಕೆ.ರಾಮಕೃಷ್ಣಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರದರ್ಶನ ಕಲಾ ವಿಭಾಗದ ಮಖ್ಯಸ್ಥೆ ಪ್ರೊ. ಹಂಸಿನಿ ನಾಗೇಂದ್ರ, ಸಹಾಯಕ ಪ್ರಾಧ್ಯಾಪಕ ಎಸ್.ಶಿವಣ್ಣ, ಪಟೇಲ್ ಗುಳ್ಳಪ್ಪ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಕೆ.ಬಿ.ಚಿಕ್ಕಮ್ಮ, ಅಕಾಡೆಮಿಯ ಸದಸ್ಯರಾದ ರವೀಂದ್ರನಾಥ್ ಸಿರಿವರ, ಎ.ಎಸ್.ಚಂದ್ರಶೇಖರ್, ಗೀತಾಸಿದ್ಧಿ ಹಾಜರಿದ್ದರು. ರವೀಂದ್ರ ಸೊರಗಾಂವಿ ಅವರು ರಂಗಗೀತೆಗಳನ್ನು ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.