ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಬುಧವಾರ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ.
ಈ ಹಿಂದೆ ಆಗಸ್ಟ್ 6ರಂದು 8.26 ಲಕ್ಷ ಜನರು ಒಂದು ದಿನದಲ್ಲಿ ಪ್ರಯಾಣಿಸಿದ್ದು ಅತ್ಯುತ್ತಮ ದಾಖಲೆಯಾಗಿತ್ತು.
ಆಗಸ್ಟ್ 14, ಬುಧವಾರದಂದು 9.17 ಲಕ್ಷ ಜನ ಸಂಚರಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ, ಫಲಪುಷ್ಫ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿಂದಾಗಿ ಮೆಟ್ರೊದಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.