ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ವಿದ್ಯುತ್‌ ಕಂಬಗಳ ಮೇಲಿನ ಕೇಬಲ್‌ಗಳ ತೆರವಿಗೆ ಬೆಸ್ಕಾಂ ಸೂಚನೆ

Published 6 ಜುಲೈ 2024, 16:09 IST
Last Updated 6 ಜುಲೈ 2024, 16:09 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಒಎಫ್‌ಸಿ ಕೇಬಲ್‌, ಡೇಟಾ ಕೇಬಲ್‌ ಹಾಗೂ ಡಿಶ್ ಕೇಬಲ್‌ಗಳನ್ನು ಜುಲೈ 8ರ ಒಳಗೆ ತೆರವುಗೊಳಿಸಲು ಬೆಸ್ಕಾಂ ಸೂಚನೆ ನೀಡಿದೆ.

2023ರ ಆಗಸ್ಟ್‌ನಲ್ಲಿ ಬೆಸ್ಕಾಂನಿಂದ ವಿಶೇಷ ಕಾರ್ಯಾಚರಣೆ ನಡೆಸಿ ಕೇಬಲ್‌ಗಳನ್ನು ತೆರವು ಮಾಡಲಾಗಿತ್ತು. ಮತ್ತೆ ಕೇಬಲ್‌ ಅಳವಡಿಸಲಾಗಿದೆ. 

‘ಸಂಬಂಧಿಸಿದ ಇಂಟರ್‌ನೆಟ್‌ ಸೇವಾ ಕಂಪನಿಗಳು, ಟಿವಿ ಕೇಬಲ್‌ ಆಪರೇಟರ್‌ಗಳು ತೆರವುಗೊಳಿಸದೇ ಇದ್ದರೆ ಬೆಸ್ಕಾಂ ವತಿಯಿಂದ ಯಾವುದೇ ಸೂಚನೆ ನೀಡದೇ ತೆರವುಗೊಳಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದೆ.

ಅನಧಿಕೃತ ಕೇಬಲ್‌ಗಳಿಂದಾಗಿ ವಿದ್ಯುತ್‌ ಅವಘಡ ಉಂಟಾದರೆ ಸಂಬಂಧಿಸಿದ ಕೇಬಲ್‌ ಆಪರೇಟರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT