ಬೆಂಗಳೂರು; ಭಾರತ್ ಬಂದ್ಗೆ ರಾಜಧಾನಿ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಲವೆಡೆ ಅಂಗಡಿಗಳು ತೆರೆದಿದ್ದು, ಕೆಲವೆಡೆ ಅಂಗಡಿಗಳು ಬಂದ್ ಆಗಿವೆ. ಬಹುತೇಕ ಕಡೆ, ಜನರು ರಸ್ತೆಗೆ ಬಂದಿಲ್ಲ. ಹೀಗಾಗಿ, ಅಂಗಡಿಗಳು ತೆರೆದಿದ್ದರೂ ಗ್ರಾಹಕರು ಕಾಣಿಸುತ್ತಿಲ್ಲ.

ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ, ಶೇಷಾದ್ರಿಪುರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಅಂಗಡಿಗಳಯ ಭಾಗಶಃ ತೆರೆದಿವೆ.

ಮೆಜೆಸ್ಟಿಕ್, ಗಾಂಧಿನಗರ ಹಾಗೂ ಸುತ್ತಮುತ್ತಲೂ ಶೇ 75ರಷ್ಟು ಅಂಗಡಿಗಳು ಬಂದ್ ಇವೆ. ಉಳಿದಂತೆ, ಕೆಲವರು ಅರ್ಧ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಎಲ್ಲ ಕಡೆಯೂ ಗ್ರಾಹಕರ ಸಂಖ್ಯೆ ತೀರಾ ಕಡಿಮೆ ಇದೆ.

ಬಟ್ಟೆ ಅಂಗಡಿಗಳು, ಮೊಬೈಲ್ ಮಳಿಗೆಗಳು, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆ, ಪುಸ್ತಕ ಅಂಗಡಿ, ಕಿರಾಣಿ ಅಂಗಡಿ, ಕಿರು ಸೂಪರ್ ಮಾರ್ಕೆಟ್ ಹಾಗೂ ಇತರೆ ಅಂಗಡಿಗಳು ತೆರೆದಿವೆ.

ಕೆಲ ಸಂಘಟನೆಗಳ ಕಾರ್ಯಕರ್ತರು, ಬೆಳಿಗ್ಗೆ ಅಂಗಡಿ ಬಳಿ ಬಂದು ಬಂದ್ ಮಾಡಲು ಹೇಳಿದ್ದರು. ಕೆಲ ಮಾಲೀಕರು, ಸ್ವಯಂಪ್ರೇರಿತವಾಗಿ ಅಂಗಡಿ ಮುಚ್ಚಿದರು.

ಯಾವುದೇ ಅನುಮತಿ ಇಲ್ಲ; ನಗರದಲ್ಲಿ ಪ್ರತಿಭಟನೆ ನಡೆಸಲು ಯಾವುದೇ ಸಂಘಟನೆಯವರು ಅನುಮತಿ ಪಡೆದಿಲ್ಲವೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಹಲವೆಡೆ ಪ್ರತಿಭಟನೆ: ನಗರದ ಪುರಭವನ, ಸುಮನಹಳ್ಳಿ ವೃತ್ತ, ಕೆ.ಆರ್.ಪುರ, ಕನಕಪುರ ರಸ್ತೆಯಲ್ಲಿ ಕಾರ್ಮಿಕರು ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಇದನ್ನೂ ಓದಿ:ಭಾರತ ಬಂದ್: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಪ್ರತಿಭಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.