ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಉಲ್ಲಂಘನೆ: 3 ತಿಂಗಳ ಅವಧಿಗೆ 8 ಆರ್‌.ಸಿ ಅಮಾನತು

Published 27 ಫೆಬ್ರುವರಿ 2024, 15:55 IST
Last Updated 27 ಫೆಬ್ರುವರಿ 2024, 15:55 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ಪೂರ್ವ ವಿಭಾಗದಲ್ಲಿ ವ್ಹೀಲೆ ನಡೆಸಿ, ಸಂಚಾರ ನಿಯಮ ಉಲ್ಲಂಘಿಸಿದ್ದ ಎಂಟು ಬೈಕ್‌ ಮಾಲೀಕರ ನೋಂದಣಿ ಪ್ರಮಾಣಪತ್ರಗಳನ್ನು ಅಮಾನತು ಮಾಡಲಾಗಿದೆ.

30 ನೋಂದಣಿ ಪ್ರಮಾಣಪತ್ರಗಳನ್ನು ಅಮಾನತು ಮಾಡಲು ಪ್ರಾದೇಶಿಕ ಸಾರಿಗೆ ಇಲಾಖೆಗೆ ಕಳುಹಿಸಲಾಗಿತ್ತು.ಈ ಪೈಕಿ ಎಂಟು ಪ್ರಮಾಣಪತ್ರಗಳನ್ನು ಮೂರು ತಿಂಗಳ ಅವಧಿಗೆ ಅಮಾನತು ಮಾಡಲಾಗಿದೆ. ಉಳಿದಂತೆ, 16 ನೋಂದಣಿ ಪತ್ರಗಳನ್ನು ಅಮಾನತು ಮಾಡುವಂತೆ ಆರ್‌ಟಿಒ ಕಚೇರಿ ಜೊತೆಗೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ. 46 ವ್ಹೀಲೆ ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಆ ಪೈಕಿ 34 ಮಂದಿ ವಯಸ್ಕರರು ಹಾಗೂ 12 ಮಂದಿ ಬಾಲಕರು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT