ಕಿರಿಕಿರಿ ತಪ್ಪಿಸಲಿರುವ ಸ್ಮಾರ್ಟ್ ಇಟಿಎಂ
‘ನಗದುರಹಿತ ಟಿಕೆಟ್ ವ್ಯವಸ್ಥೆ ಜಾರಿಗಾಗಿ ಬಾಡಿಗೆ ಆಧಾರದಲ್ಲಿ 10 ಸಾವಿರ ಸುಧಾರಿತ ಆಧುನಿಕ ತಂತ್ರಜ್ಞಾನ ಇರುವ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ಇಟಿಎಂ) ಗಳನ್ನು ಬಿಎಂಟಿಸಿಯಲ್ಲಿ ಬಳಕೆಗೆ ಒದಗಿಸಲಾಗುವುದು. ಷರತ್ತುಗಳನ್ನು ಇನ್ನಷ್ಟು ಸರಳ ಮಾಡಿ ಮರು ಟೆಂಡರ್ ಕರೆಯಲಾಗುವುದು. ನಾಲ್ಕೈದು ತಿಂಗಳ ಒಳಗೆ ಇಟಿಎಂಗಳನ್ನು ನಿರ್ವಾಹಕರಿಗೆ ಒದಗಿಸಲಾಗುವುದು. ಟಿಕೆಟ್ ಮುದ್ರಣವಾಗಲು ತಡವಾಗುವ ಸಮಸ್ಯೆ ಹೊಸ ಸ್ಮಾರ್ಟ್ ಇಟಿಎಂ ಯಂತ್ರದಲ್ಲಿ ಇರುವುದಿಲ್ಲ. ಇದರಿಂದ ನಿರ್ವಾಹಕರಿಗೆ ಕಿರಿಕಿರಿ ಉಂಟಾಗುವುದಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.