ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಪಡೆದಿರುವ ಒಳಚರಂಡಿ ಮತ್ತು ಕಾವೇರಿ ನೀರಿನ ಸಂಪರ್ಕ ಪತ್ತೆಗಾಗಿ ಬೆಂಗಳೂರು ಜಲಮಂಡಳಿ, ನಾಲ್ವರು ಸದಸ್ಯರನ್ನೊಳಗೊಂಡ ವಿಶೇಷ ಕಾರ್ಯಪಡೆಯೊಂದನ್ನು ರಚಿಸಲು ಮುಂದಾಗಿದೆ.

‘ನೀಲಿ ಪಡೆ (ಬ್ಲ್ಯೂ ಫೋರ್ಸ್)’ ಹೆಸರಿನ ವಿಶೇಷ ತಂಡವನ್ನು ಜಲಮಂಡಳಿಯ 43 ಉಪವಿಭಾಗಗಳಲ್ಲೂ ನಿಯೋಜಿಸಲಾಗುತ್ತದೆ. ಈ ತಂಡ ಆಯಾ ಉಪವಿಭಾಗದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮ ಸಂಪರ್ಕವನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ₹5 ಸಾವಿರ ದಂಡ ವಿಧಿಸಲಿದೆ. ಆ ಮೂಲಕ ಜಲಮಂಡಳಿಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಲಿದೆ.

‘ಹದಿನೈದು ದಿನಗಳಲ್ಲಿ ಕಾರ್ಯಪಡೆ ರಚನೆಯಾಗಿ, ಅಧಿಕೃತವಾಗಿ ಕೆಲಸ ಆರಂಭವಾಗುವ ನಿರೀಕ್ಷೆ ಇದೆ’ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿ ಕಾರ್ಯಪಡೆಯಲ್ಲಿ ಒಬ್ಬರು ಮಾಜಿ ಸೈನಿಕ ಅಥವಾ ನಿವೃತ್ತ ಪೊಲೀಸ್ ಅಧಿಕಾರಿಯ ಜೊತೆಗೆ ಜಲಮಂಡಳಿಯ ಮೂವರು ಸಿಬ್ಬಂದಿ(ಲೀಕ್ ಗ್ಯಾಂಗ್) ಇರುತ್ತಾರೆ. ತಂಡಕ್ಕೊಂದು ಪ್ರತ್ಯೇಕ ವಾಹನವಿರುತ್ತದೆ. ಈ ತಂಡ ಉಪವಲಯಗಳಲ್ಲಿ ನಿರಂತರವಾಗಿ ತಪಾಸಣೆ ನಡೆಸಿ ಅನಧಿಕೃತ ನೀರಿನ ಸಂಪರ್ಕ ಮತ್ತು ಒಳಚರಂಡಿ ಸಂಪರ್ಕಗಳನ್ನು ಪತ್ತೆ ಹಚ್ಚಲಿದೆ. ಅಲ್ಲದೆ ಮನೆ ಮೇಲೆ ಸುರಿಯುವ ಮಳೆ ನೀರಿನ ಸಂಪರ್ಕವನ್ನು ಒಳಚರಂಡಿಗೆ ನೀಡಿರುವಂತಹ ಪ್ರಕರಣಗಳನ್ನು ಪತ್ತೆ ಮಾಡಿ ದಂಡ ವಿಧಿಸಲಿದೆ.

‘ನಗರದಾದ್ಯಂತ 11 ಲಕ್ಷಕ್ಕೂ ಹೆಚ್ಚು ಅಧಿಕೃತವಾದ ಕಾವೇರಿ ನೀರಿನ ಸಂಪರ್ಕಗಳಿವೆ. ಪ್ರತಿ ನಿತ್ಯ 2,225 ದಶಲಕ್ಷ ಲೀಟರ್ ಕಾವೇರಿ ನೀರು ನಗರಕ್ಕೆ ಪೂರೈಕೆಯಾಗುತ್ತಿದೆ. ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಗೊಂಡ 110 ಹಳ್ಳಿಗಳ ವ್ಯಾಪ್ತಿಯ ಅನೇಕ ಮನೆಗಳಿಗೆ ಒಳಚರಂಡಿ ಸಂಪರ್ಕವಿರುತ್ತದೆ, ಆದರೆ ಕಾವೇರಿ ನೀರಿನ ಸಂಪರ್ಕ ಪಡೆದಿರುವುದಿಲ್ಲ. ಸಿಎಂಸಿಯ ಕೊಳವೆಬಾವಿಯಿಂದ ಉಚಿತ ನೀರು ಪಡೆಯುತ್ತಾರೆ. ಕಾರ್ಯಪಡೆ ಇಂಥ ಮನೆಗಳನ್ನು ಪತ್ತೆ ಹಚ್ಚಿ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಿ, ದಂಡ ವಿಧಿಸಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪ್ರತಿ ಕಾರ್ಯಪಡೆಗೆ ₹2 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಇದು ಪ್ರಸ್ತಾವದ ಹಂತದಲ್ಲಿದ್ದು, ಮಂಡಳಿಯಿಂದ ಒಪ್ಪಿಗೆ ಸಿಕ್ಕ ನಂತರ ವಿಶೇಷ ಪಡೆ ಕಾರ್ಯಾರಂಭ ಮಾಡಲಿದೆ’ ಎಂದು ಜಲಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

16.44 ಮನೆಗಳಿಗೆ ನೋಟಿಸ್

ಜಲಮಂಡಳಿ ಪ್ರಸ್ತುತ 3.15 ಲಕ್ಷ ಮನೆಗಳ ಸಮೀಕ್ಷೆ ಮಾಡಿದೆ. ಇದರಲ್ಲಿ ಅನಧಿಕೃತವಾಗಿ ಮಳೆ ನೀರಿನ ಸಂಪರ್ಕವನ್ನು ಒಳಚರಂಡಿಗೆ ನೀಡಿರುವ 16445 ಪ್ರಕರಣಗಳನ್ನು ಪತ್ತೆ ಮಾಡಿದೆ. ಇದರಲ್ಲಿ 11877 ಮನೆಗಳಿಗೆ ನೋಟಿಸ್ ನೀಡಲಾಗಿದೆ. 8902 ಮನೆಗಳ ಅಕ್ರಮ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಜಲಮಂಡಳಿ ತಿಳಿಸಿದೆ.

‘ಜೂ.15ರ ನಂತರ ಕಾರ್ಯಪಡೆ ಆರಂಭ’

‘ಅಕ್ರಮ ನೀರು ಮತ್ತು ಒಳಚರಂಡಿ ಸಂಪರ್ಕ ಪತ್ತೆಗೆ ರಚಿಸಲಿರುವ ನೀಲಿ ಕಾರ್ಯಪಡೆ ಜೂ.15ರಿಂದ ಕೆಲಸ ಆರಂಭಿಸಲಿದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್ಪ್ರಸಾತ್ ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಕ್ರಮವಾಗಿ ಒಳಚರಂಡಿ ಸಂಪರ್ಕ ಪಡೆದಿರುವವರು ಜೂನ್ 15ರೊಳಗೆ ಸಕ್ರಮಗೊಳಿಸಿ ಕೊಳ್ಳಬೇಕು. ಕಾರ್ಯಪಡೆಯ ತಪಾಸಣೆ ವೇಳೆ ಅಕ್ರಮ ಕಂಡು ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.

ಈಗಾಗಲೇ ಸಮೀಕ್ಷೆ ನಡೆದು ವರದಿಗಳು ಬರುತ್ತಿವೆ. ಕೃತಕ ಬುದ್ಧಿಮತ್ತೆ ಬಳಸಿಕೊಂಡು ಸಮೀಕ್ಷೆ ನಡೆಸಿದ್ದೇವೆ. ಇದರಿಂದ ಅಕ್ರಮವಾಗಿ ಪಡೆದಿರುವ ಒಳಚರಂಡಿ ಸಂಪರ್ಕಗಳ ದತ್ತಾಂಶ ಲಭ್ಯವಾಗುತ್ತದೆ. ಜೂ.15ರವರೆಗೆ ದಂಡವಷ್ಟೇ ಹಾಕಲಾಗುತ್ತದೆ. ಆ ನಂತರ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.