ಸೋಮವಾರ, ಅಕ್ಟೋಬರ್ 18, 2021
23 °C

ಹೆಣ್ಣೂರು ಜಂಕ್ಷನ್‌ನಲ್ಲಿ ‘ಕಾಸಾಗ್ರ್ಯಾಂಡ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಹೆಣ್ಣೂರು ಜಂಕ್ಷನ್‌ನಲ್ಲಿ ‘ಕಾಸಾಗ್ರ್ಯಾಂಡ್‌’ ಕಂಪನಿಯು ‘ಕಾಸಾಗ್ರ್ಯಾಂಡ್ ಒರ್ಲೆನಾ’ ಎನ್ನುವ ಹೊಸ ಯೋಜನೆಯನ್ನು ಅನಾವರಣಗೊಳಿಸಿದೆ.

ನಾಲ್ಕು ಎಕರೆ ಪ್ರದೇಶದಲ್ಲಿ 296 ಆಧುನಿಕ ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಅತ್ಯಾಧುನಿಕ ಐಷಾರಾಮಿ ಸೌಲಭ್ಯ ಗಳನ್ನು ಇಲ್ಲಿ ಕಲ್ಪಿಸಲಾಗಿದೆ. 1,078 ಚದರ ಅಡಿಯಿಂದ 1,733 ಚದರ ಅಡಿಯವರೆಗಿನ 2 ಮತ್ತು 3 ಬಿಎಚ್‌ಕೆ ಹೊಂದಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ.

24,500 ಚದರ ಅಡಿಯ ಕ್ಲಬ್‌ಹೌಸ್‌ ಅನ್ನು ಸಹ ನಿರ್ಮಿಸಲಾಗಿದೆ. ಒಳಾಂಗಣ ಬ್ಯಾಡ್ಮಿಂಟನ್‌ ಮೈದಾನ, ಈಜುಕೊಳ, ಜಿಮ್‌ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 

‘ವೃತ್ತಿಪರರಿಗೆ ಈ ಯೋಜನೆಯು ಅತ್ಯಂತ ಅನುಕೂಲವಾಗಿದೆ. ಮಾನ್ಯತಾ ಟೆಕ್‌ ಪಾರ್ಕ್‌ಗೆ ಅತಿ ಹತ್ತಿರದಲ್ಲಿದೆ. ಕಾಸಾಗ್ರ್ಯಾಂಡ್‌ನ ಹಿಂದಿನ ಯೋಜನೆಗಳಿಗೆ ಖರೀದಿದಾರರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಮನೆ ಹೊಂದಲು ಬಯಸು
ವವರಿಗೆ ಈ ಯೋಜನೆಯು ಅತ್ಯುತ್ತಮವಾಗಿದೆ’ ಎಂದು ಕಾಸಾಗ್ರ್ಯಾಂಡ್‌ನ ಬೆಂಗಳೂರು ವಲಯದ ನಿರ್ದೇಶಕ ಸಿ.ಜಿ. ಸತೀಶ್‌ ತಿಳಿಸಿದ್ದಾರೆ.

‘ಮನೆಗಳನ್ನು ಯೋಗ್ಯದರದಲ್ಲಿ ಮಾರಾಟ ಮಾಡಲು ಕಂಪನಿ ಮುಂದಾಗಿದ್ದು, ಚದರ ಅಡಿಗೆ ₹4,999 ದರ ನಿಗದಿ ಮಾಡಲಾಗಿದೆ. ಈ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಅಂತರರಾಷ್ಟ್ರೀಯ ವಿಮಾ ನಿಲ್ದಾಣ, ಶಾಲೆ ಮತ್ತು ಕಾಲೇಜುಗಳು ಹಾಗೂ ಆಸ್ಪತ್ರೆಗಳ ಸಮೀಪದಲ್ಲಿವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು