ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದಲ್ಲಿ ಜಾತಿ ಜಾಗತೀಕರಣ’

Last Updated 15 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತದಲ್ಲಿ ವಿವೇಕದ ಜಾಗತೀಕರಣ ಆಗಬೇಕಿತ್ತು. ಆದರೆ,ಜಾತಿಯ ಜಾಗತೀಕರಣವಾಗಿದೆ’ ಎಂದುಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಲೇಖಕ ಮಲ್ಲಿಕಾರ್ಜುನ ಕಡಕೋಳರಚಿಸಿದ 'ಯಡ್ರಾಮಿ ಸೀಮೆ ಕಥನಗಳು' ಪುಸ್ತಕವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಭಾರತದಲ್ಲಿನ ಜಾಗತೀಕರಣ ಏಕಮುಖ ಚಲನೆ
ಯಾಗಿದೆ. ಸ್ಥಳೀಯತೆಯೇ ನಿಜವಾದ ತಾಯಿ ಬೇರು. ಸ್ಥಳೀಯ ಚರಿತ್ರೆ ಬಹಳ ಮುಖ್ಯ. ಇಂತಹ ಸ್ಥಳೀಯ ಸತ್ಯವನ್ನು ಅನಾವರಣಗೊಳಿಸುವಂತಹ ಕೆಲಸವನ್ನು ಕಡಕೋಳ ಅವರು ಈ ಕೃತಿಯಲ್ಲಿ ಮಾಡಿದ್ದಾರೆ’ ಎಂದರು.

‘ಭೀಮಾತೀರ ಎಂದರೆ ಬರೀ ಹಂತಕರ ನಾಡೆಂಬ ಹಣೆಪಟ್ಟಿ ಇದೆ. ಆದರೆ ಲೇಖಕರು ಇಲ್ಲಿ ಬೆಳದಿಂಗಳೂ ಇದೆ ಎಂಬುದನ್ನು ಮನಗಾಣಿಸುತ್ತಾರೆ’ ಎಂದು ಹೇಳಿದರು.

ಲೇಖಕ ಪ್ರೊ. ಬಸವರಾಜ ಸಬರದ ಮಾತನಾಡಿ, ‘ಕಡಕೋಳ ಕೃತಿಯು ಯಡ್ರಾಮಿಗೆ ಸೀಮಿತವಾಗದೇ ಹೈದರಾಬಾದ್ ಕರ್ನಾಟಕದ ಚಿತ್ರಣ ಕಟ್ಟಿಕೊಟ್ಟಿದ್ದಾರೆ’ ಎಂದರು.

‘ಹೈದರಾಬಾದ್ ಕರ್ನಾಟಕ ವಿಮೋಚನೆಯು ಹತ್ಯಾಕಾಂಡವಾಗಿತ್ತು. ಇದನ್ನು ಸಂಭ್ರಮಿಸುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸರ್ಕಾರಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ತಕ್ಷಣ ಅಭಿವೃದ್ಧಿಯಾಗುವುದಿಲ್ಲ. ಹೆಚ್ಚಿನ ಅನುದಾನ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT