ಭಾನುವಾರ, ಜೂಲೈ 5, 2020
27 °C

ದರೋಡೆಗೆ ಸಂಚು: ಸಿಸಿಬಿ ಪೊಲೀಸರಿಂದ ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ ನಗದು, ಚಿನ್ನಾಭರಣ ದೋಚಲು ಸಂಚು ರೂಪಿಸುತ್ತಿದ್ದ ಐದು ಮಂದಿಯನ್ನು ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಯಲಹಂಕದ ಅಳ್ಳಾಳಸಂದ್ರ ಕೆರೆಯ ಬಳಿಯ ಅಂಬೇಡ್ಕರ್‌ ಕಾಲೊನಿಯಿಂದ ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ಕಾನ್ಸಿರಾಮ್ ನಗರದ ನಿವಾಸಿಗಳಾದ ಎಂ. ನಾಗರಾಜ (19), ಪ್ರೇಮ್ ಕುಮಾರ್‌ (21), ಶ್ರೇಯಸ್‌ (20), ನಂದನ್‌ (22), ನಾಗಶೆಟ್ಟಿಹಳ್ಳಿಯ ಕೆವಿನ್‌ (19) ಬಂಧಿತರು. ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಆರೋಪಿಗಳ ‍ಪೈಕಿ ಪ್ರೇಮ್‌ ಕುಮಾರನ ವಿರುದ್ಧ ಗಂಗಮ್ಮನಗುಡಿ ಠಾಣೆಯಲ್ಲಿ ಕೊಲೆಯತ್ನ, ಯಲಹಂಕ ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣ ದಾಖಲಾಗಿದೆ. ಶ್ರೇಯಸ್ ವಿರುದ್ಧ ಕೂಡಾ ಗಂಗಮ್ಮನ ಗುಡಿ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಅರುಣ್‌ ಎಂಬಾತನನ್ನು ಕೊಲೆ ಮಾಡಿದ ಆರೋಪದಲ್ಲಿ ನಂದನ್‌ ವಿರುದ್ಧ ಯಲಹಂಕ ಠಾಣೆಯಲ್ಲಿ ಪ್ರಕರಣವಿದೆ. ಅಲ್ಲದೆ, ಆತನ ವಿರುದ್ಧ ಗಂಗಮ್ಮನಗುಡಿ ಠಾಣೆಯಲ್ಲಿ ಕೊಲೆಯತ್ನ ಪ್ರಕರಣವೂ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು