ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಣಕ್ಯ ವಿ.ವಿ ಲಾಂಛನ ಅನಾವರಣ

Last Updated 12 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾಲಯವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತನ್ನ ಲಾಂಛನವನ್ನು ಅನಾವರಣ ಮಾಡಿತು.

‘ಮೌಲ್ಯ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ವಿಶ್ವವಿದ್ಯಾಲಯದ ಧ್ಯೇಯವು ಲಾಂಛನದ ಮೂಲಕ ವ್ಯಕ್ತವಾಗಿರುವುದು ಸಂತಸ ತಂದಿದೆ’ ಎಂದುಉದ್ಯಮ್ ಲರ್ನಿಂಗ್ ಫೌಂಡೇ ಶನ್ ಸಂಸ್ಥಾಪಕ ಮೇಕಿನ್‌ ಮಹೇಶ್ವರಿ ತಿಳಿಸಿದರು.

‘ಲಾಂಛನವು ವಿಶ್ವವಿದ್ಯಾಲಯದ ತತ್ವ, ಧ್ಯೇಯ ನಿಷ್ಠೆಯನ್ನು ಬಿಂಬಿಸುತ್ತದೆ. ಲಾಂಛನ ಅನಾವರಣವು ಐತಿಹಾಸಿಕ ಸಂದರ್ಭ. ಇದ ರಲ್ಲಿ ವಿ.ವಿಯ ಸಂಪೂರ್ಣ ದೃಷ್ಟಿ ಬಿಂಬಿತವಾಗಿದೆ’ ಎಂದುಚಾಣಕ್ಯ ವಿವಿಯ ಕುಲಪತಿಪ್ರೊ.ಯಶವಂತ ಡೋಂಗ್ರೆ ತಿಳಿಸಿದರು.

‘ಲಾಂಛನ ಅನಾವರಣ ಕಾರ್ಯ ಕ್ರಮವು ವಿಶ್ವವಿದ್ಯಾಲಯದ ಅಧಿಕೃತ ಲೋಕಾರ್ಪಣೆಗೆ ಮುನ್ನುಡಿಯಾಗಿದೆ. 2022ರ ನ.19ರಂದುಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಸುಶಾಂತ್ ಜೋಶಿ, ಸಂವಹನ ನಿರ್ದೇಶಕ ವಿನಯಚಂದ್ರ ಬನವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT