ಸೋಮವಾರ, ಜೂನ್ 27, 2022
26 °C

ಪ್ರತಿಭಟನೆಗೆ ಮಕ್ಕಳ ಬಳಕೆ ಸಲ್ಲ: ನಾಗಸಿಂಹ ಜಿ.ರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದಲ್ಲಿ ವಿವಿಧ ಮುಷ್ಕರಗಳು ನಡೆಯುತ್ತಿವೆ. ಸರ್ಕಾರಿ ನೌಕರರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮುಷ್ಕರ ನಿರತ ನೌಕರರು ತಮ್ಮ ಮಕ್ಕಳನ್ನು ಪ್ರತಿಭಟನೆಗೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಅಭಿಪ್ರಾಯಪಟ್ಟಿದೆ.

‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಪುಟ್ಟ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ನೌಕರರಿಗೆ ಅನ್ಯಾಯವಾಗಿದ್ದರೆ ಅವರ ಸಂಘಟನೆಯ ಮೂಲಕ ಹೋರಾಟ ಮಾಡಬೇಕೇ ಹೊರತು ಮಕ್ಕಳನ್ನು ಮುಷ್ಕರದಲ್ಲಿ ಬಳಸಿಕೊಳ್ಳಬಾರದು’ ಎಂದು ಟ್ರಸ್ಟ್‌ನ ನಿರ್ದೇಶಕ ನಾಗಸಿಂಹ ಜಿ. ರಾವ್‌ ಹೇಳಿದ್ದಾರೆ.

‘ಮಕ್ಕಳನ್ನು ಈ ರೀತಿ ಮುಷ್ಕರಕ್ಕೆ ಬಳಸಿಕೊಳ್ಳುವುದು ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 19ರ ಉಲ್ಲಂಘನೆಯಾಗುತ್ತದೆ. ಮುಷ್ಕರದಲ್ಲಿ ಮಕ್ಕಳನ್ನು ಬಳಸುವುದು ಮಾತ್ರವಲ್ಲ ಮಕ್ಕಳಿಂದ ತಮ್ಮ ಮಾತನ್ನು ಆಡಿಸಿ ವಿಡಿಯೊ ಮಾಡಿ ಅದನ್ನು ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಡಲಾಗುತ್ತಿದೆ. ಇದು ಸರಿಯಲ್ಲ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ. 

‘ವಿಡಿಯೊದಲ್ಲಿ ಸರ್ಕಾರವನ್ನು ಹೀಯಾಳಿಸುವ ಮಕ್ಕಳಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬುದರ ಅರಿವಿಲ್ಲ. ಮುಷ್ಕರಗಳಿಗೆ, ಚುನಾವಣಾ ಪ್ರಚಾರಗಳಿಗೆ, ಧಾರ್ಮಿಕ ಪ್ರಚಾರಗಳಿಗೆ ಮಕ್ಕಳನ್ನು ಬಳಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಸರ್ಕಾರ ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಕೂಡಲೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು