ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಶನಿವಾರ ತಾಯಿಯಿಂದ ಮಗು ಬೇರ್ಪಟ್ಟಿದ್ದರಿಂದ ಸ್ವಲ್ಪ ಕಾಲ ಆತಂಕದ ಸನ್ನಿವೇಶ ಸೃಷ್ಟಿಯಾಯಿತು.

ಮೈಸೂರು ರಸ್ತೆ ಕಡೆಯಿಂದ ತಾಯಿ ಮತ್ತು ಮಗು ಮಧ್ಯಾಹ್ನ 1.30ರ ಸುಮಾರಿಗೆ ಮೆಟ್ರೊ ಹತ್ತಿದ್ದರು. ಮಾಗಡಿ ರಸ್ತೆಯಲ್ಲಿ ಇಳಿಯಬೇಕಿತ್ತು. ಮಾಗಡಿ ರಸ್ತೆ ನಿಲ್ದಾಣದಲ್ಲಿ ಮೆಟ್ರೊ ನಿಂತಾಗ ಮೆಟ್ರೊ ಹತ್ತುವವರು ಒಮ್ಮೆಲೇ ನುಗ್ಗಿದ್ದರಿಂದ ತಾಯಿ ಇಳಿದು ಮಗು ಇಳಿಯುವ ಮೊದಲೇ ಮೆಟ್ರೊ ಬಾಗಿಲು ಮುಚ್ಚಿ ಮುಂದಕ್ಕೆ ಚಲಿಸಿತು.

ತಾಯಿಯಿಂದ ಬೇರ್ಪಟ್ಟ ಮಗು ಜೋರಾಗಿ ಅಳತೊಡಗಿದಾಗ, ಸಹಪ್ರಯಾಣಿಕರು ಸಮಾಧಾನ ಪಡಿಸಿದರು. ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಿಲ್ದಾಣದಲ್ಲಿ ಯುವಕನೊಬ್ಬ ಮಗುವಿನೊಂದಿಗೆ ಇಳಿದು, ತಾಯಿ ಬರುವವರೆಗೆ ಕಾದು ಮಗುವನ್ನು ಸುರಕ್ಷಿತವಾಗಿ ಮುಟ್ಟಿಸಿದ್ದಾರೆ ಎಂದು ಮೆಟ್ರೊ ಪ್ರಯಾಣಿಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.