ಶನಿವಾರ, ಜುಲೈ 2, 2022
25 °C
ವಾತಾವರಣ ಸಮೀಕ್ಷೆ

ಭಾರತ, ಪಾಕಿಸ್ತಾನದಲ್ಲಿ ನಿರೀಕ್ಷೆಗೂ ಮೊದಲೇ ಹೆಚ್ಚಿದ ಬಿಸಿಗಾಳಿ ತೀವ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನದಲ್ಲಿ ಅಂದಾಜು ಮಾಡಿದ್ದ ಅವಧಿಗಿಂತಲೂ ಮೊದಲೇ ಬಿಸಿ ಗಾಳಿಯ ತೀವ್ರತೆಯು ಹೆಚ್ಚಿದ್ದು, ಬಹುತೇಕ 30 ಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಸ್ಥಿತಿಗೆ ಬಹುತೇಕ ಮಾನವ ನಿರ್ಮಿತ ಹವಾಮಾನ ಬದಲಾವಣೆ ಪರಿಸ್ಥಿತಿಯೇ ಕಾರಣವಾಗಿದೆ.

2022ರಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಬಿಸಿಗಾಳಿಯ ಸ್ಥಿತಿಗತಿ ಕುರಿತು ವಿಶ್ವದ ವಿವಿಧ ದೇಶಗಳ ವಿಜ್ಞಾನಿಗಳು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ವಿಶ್ವ ಹವಾಮಾನ ಅಂದಾಜು ಸಮೂಹಕ್ಕೆ ಸೇರಿದ ವಿಶ್ವದ ವಿವಿಧೆಡೆಯ 29 ಸಂಶೋಧಕರು ಸಮೀಕ್ಷೆ ಕೈಗೊಂಡಿದ್ದರು.

ಇವರಲ್ಲಿ ಭಾರತ, ಪಾಕಿಸ್ತಾನ, ಫ್ರಾನ್ಸ್, ಅಮೆರಿಕ, ಬ್ರಿಟನ್ ಮತ್ತು ಇತರೆ ದೇಶಗಳ ಸಂಶೋಧಕರು ಇದ್ದರು. ಆದರೆ, ಎಷ್ಟು ಅವಧಿಯಲ್ಲಿ ಈ ಬದಲಾವಣೆ ಉಂಟಾಗಿದೆ ಎಂದು ನಿಖರವಾಗಿ ಅಂದಾಜಿಸಲು ಉಭಯ ದೇಶಗಳಲ್ಲಿ 1979ರಿಂದ ಲಭ್ಯವಿರುವ ಅಂಕಿ ಅಂಶಗಳು ಸಾಲದು. ಭಾರತಕ್ಕೆ ಅನ್ವಯಿಸಿ 1951ರಿಂದ ಅಂಕಿ ಅಂಶಗಳು ಲಭ್ಯವಿವೆ. ಸಮೀಕ್ಷೆಯಲ್ಲಿ ಗಂಭೀರ ಅಂಶಗಳು ಹೊರಬಿದ್ದಿವೆ.  

ಪ್ರಸ್ತುತ ಇರುವ 1.2 ಡಿಗ್ರಿ ಸೆಲ್ಸಿಯಸ್‌ ಜಾಗತಿಕ ತಾಪಮಾನದಲ್ಲಿ, ಶತಮಾನಕ್ಕೆ ಒಮ್ಮೆ ಮಾತ್ರ ಅನುಭವಕ್ಕೆ ಬರುವ ಸಂಗತಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ತಾಪಮಾನವು ನಿರಂತರವಾಗಿ ಏರಿಕೆ ಆಗುತ್ತಿದೆ. ಕೈಗಾರಿಕೆ ಪೂರ್ವದ ಅವಧಿಗೆ ಹೋಲಿಸಿದರೆ ಬಿಸಿಗಾಳಿಯ ತೀವ್ರತೆಯು 30 ಪಟ್ಟು ಅಧಿಕವಾಗಿದೆ ಎಂದು ಸಮೀಕ್ಷೆಯ ವರದಿಯು ತಿಳಿಸಿದೆ. 

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸಂಶೋಧಕಿ ಮಾರಿಯಂ ಜಛಾರಿಯ ಅವರು, ಅಂಕಿ ಅಂಶಗಳನ್ನು ಆಧರಿಸಿ ಜಾಗತಿಕ ಬದಲಾವಣೆಯ ಸ್ಥಿತಿಗತಿ ರಹಿತ ಮತ್ತು ಸಹಿತ ಪರಿಸ್ಥಿತಿಯನ್ನು ಅಂದಾಜಿಸಿ ಈ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ ಎಂದರು.

ಹೆಚ್ಚುತ್ತಿರುವ ಬಿಸಿಗಾಳಿಯ ತೀವ್ರತೆಯ ಪರಿಣಾಮಗಳಿಗೆ ಬಹುತೇಕ ಬೀದಿ ವ್ಯಾಪಾರಿಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ಕೃಷಿ ಕೂಲಿಕಾರ್ಮಿಕರು, ಸಂಚಾರ ಪೊಲೀಸರು ಗುರಿಯಾಗುತ್ತಾರೆ ಎಂದು ಆರ್‌ಸಿಆರ್‌ಸಿ ಕ್ಲೈಮೇಟ್ ಸೆಂಟರ್‌ನ ಅದಿತಿ ಕೆ.ಕಪೂರ್‌ ಅವರು ಆಭಿಪ್ರಾಯಪಟ್ಟಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು