ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂಆರ್ ವಿಶ್ವವಿದ್ಯಾಲಯ: ಶೇ 100 ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ

Last Updated 13 ಅಕ್ಟೋಬರ್ 2021, 4:30 IST
ಅಕ್ಷರ ಗಾತ್ರ

ಬೆಂಗಳೂರು: ಸಿಎಂಆರ್‌ ವಿಶ್ವವಿದ್ಯಾಲಯದ ಶೇ 100ರಷ್ಟು ವಿದ್ಯಾರ್ಥಿಗಳು ಕೋವಿಡ್‌ ನಡುವೆಯೂ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ.

‘ಸೆರ್ನರ್ಕಾರ್ಪೊರೇಷನ್‌ ಇಂಡಿಯಾ, ಬಾಷ್‌, ಕ್ಯಾಪ್‌ಜೆಮಿನಿ, ಇನ್ಫೊಸಿಸ್‌, ಬಜಾಜ್‌ ಅಲಯನ್ಸ್‌, ವಿಪ್ರೊ, ಫ್ಲಿಪ್‌ಕಾರ್ಟ್‌ ಸೇರಿದಂತೆ ದೇಶದ ಪ್ರಮುಖ ಕಂಪನಿಗಳು ವರ್ಚುವಲ್‌ ವೇದಿಕೆಯ ಮೂಲಕ ವಿಶ್ವವಿದ್ಯಾಲಯದಎಂಬಿಎ,ಬಿಬಿಎ,ಬಿ.ಟೆಕ್ ವಿದ್ಯಾರ್ಥಿಗಳ ಸಂದರ್ಶನ ನಡೆಸಿ ಕೆಲಸಕ್ಕೆ ಆಯ್ಕೆ ಮಾಡಿಕೊಂಡಿವೆ’ ಎಂದು ಪ್ರಕಟಣೆ ತಿಳಿಸಿದೆ.

‘ಎಂಬಿಎ ಪದವೀಧರರಾದ ಕೆ.ಕೆ.ಸುಬ್ಬಯ್ಯ ವಾರ್ಷಿಕ ₹7 ಲಕ್ಷ, ಆಶುತೋಷ್‌ ಕುಮಾರ್‌, ಎಸ್‌.ಕ್ಯಾಲೆಬ್‌, ಹನಿ ಸೈಯದ್‌ ಮತ್ತು ಅಖಿಲ್‌ ಹರಿ ಅವರು ವಾರ್ಷಿಕ ₹6 ಲಕ್ಷ ವೇತನ ಪಡೆಯಲಿದ್ದಾರೆ. ಕೆಲ ಬಿಬಿಎ ಪದವೀಧರರಿಗೆ ವಾರ್ಷಿಕ ₹6 ಲಕ್ಷ, ಬಿ.ಟೆಕ್‌ ಪದವೀಧರರಿಗೆ ₹11 ಲಕ್ಷದವರೆಗೂ ಪ್ಯಾಕೇಜ್‌ ನೀಡಲಾಗಿದೆ’ ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT