ಸೋಮವಾರ, ಮಾರ್ಚ್ 27, 2023
31 °C
ಡಿಪಿಆರ್ ಬಹಿರಂಗ ಪಡಿಸಲು ಆಗ್ರಹ

ಸ್ಯಾಂಕಿ ಮೇಲ್ಸೇತುವೆಗೆ ಕಾಂಗ್ರೆಸ್ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಯಾಂಕಿ ಕೆರೆ ಪಕ್ಕದ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಬಹಿರಂಗಪಡಿಸುವಂತೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ವಿಧಾನಪರಿಷ ತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಹಾಗೂ ಕೆಪಿಸಿಸಿ
ಸಂವಹನಾ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ, ರಸ್ತೆ ವಿಸ್ತರಣೆ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ರಸ್ತೆ ವಿಸ್ತರಿಸಿದರೆ ಕೆರೆಗೆ ತೊಂದರೆಯಾಗಲಿದೆ. ಅಲ್ಲಿ 100–150 ವರ್ಷದ ಹಳೆಯ ಮರಗಳಿವೆ. 80 ಕ್ಕೂ ಹೆಚ್ಚು ಪ್ರಭೇದದ ವಲಸೆ ಪಕ್ಷಿಗಳ ಮೇಲೆ ಪರಿಣಾಮ ಬೀರಲಿದೆ. ಸರ್ಕಾರ ಉದ್ದೇಶಿಸಿರುವ ಯೋಜನೆ ಬಫರ್ ವಲಯದಲ್ಲಿದ್ದು, ಯೋಜನೆ ಅನುಷ್ಠಾನ ಮಾಡಿ ದರೆ ಹಸಿರು ನ್ಯಾಯಾಧೀಕರಣದ ತೀರ್ಪು ಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹರಿಪ್ರಸಾದ್ ಪ್ರತಿಪಾದಿಸಿದರು.

ಈ ಭಾಗದಲ್ಲಿನ ಸುಗಮ ಸಂಪರ್ಕಕ್ಕಾಗಿ ಭಾಷ್ಯಂ ವೃತ್ತದಿಂದ ಮಲ್ಲೇಶ್ವರದ 18ನೇ ಅಡ್ಡರಸ್ತೆವರೆಗೂ ರಸ್ತೆ ಅಗಲೀಕರಣದ ಜತೆಗೆ ನಾಲ್ಕು ಪಥದ ಮೇಲ್ಸೇತುವೆ ನಿರ್ಮಿಸುತ್ತಿದ್ದಾರೆ. ಇದು ಜನೋಪಕಾರಿ ಯೋಜನೆಯಾಗಿದ್ದರೆ, ಜನರ ಅಭಿಪ್ರಾಯ ಸಂಗ್ರಹಿಸಬೇಕಿತ್ತು.  ಈ ಯೋಜನೆ ಬೇಡ ಎಂದು 22 ಸಾವಿರ ನಿವಾಸಿಗಳು ಸಹಿ ಹಾಕಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡು ಸಾವಿರ ಮಕ್ಕಳು ಬಿಬಿಎಂಪಿಗೆ ಮನವಿ ಮಾಡಿದ್ದಾರೆ. ಮುಂದಿನ ಪೀಳಿಗೆಗಾಗಿ ಈ ಯೋಜನೆ ಎನ್ನುತ್ತೀರಿ. ಮಕ್ಕಳೇ ಬೇಡ ಎನ್ನುತ್ತಿದ್ದಾರೆ. ಅವರ ಮನವಿ ತಿರಸ್ಕರಿಸಿ ಈ ಯೋಜನೆ ಮಾಡಲು ಮುಂದಾಗಿರುವುದೇಕೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು