ಶನಿವಾರ, ಆಗಸ್ಟ್ 20, 2022
22 °C

ಉದ್ಯಾನದಲ್ಲಿ ನಟಿ ಸಂಯುಕ್ತ ಹೆಗಡೆ ಜೊತೆ ಗಲಾಟೆ; ಕವಿತಾ ರೆಡ್ಡಿ ಬಂಧನ–ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿತಾ ರೆಡ್ಡಿ ಮತ್ತು ನಟಿ ಸಂಯುಕ್ತ ಹೆಗಡೆ

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್‌ನ ಅಗರ ಕೆರೆ ಉದ್ಯಾನದಲ್ಲಿ ವ್ಯಾಯಾಮ ಮಾಡುತ್ತಿದ್ದ ನಟಿ ಸಂಯುಕ್ತ ಹೆಗಡೆ ಅವರ ಜೊತೆ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಆರೋಪದಡಿ ಕವಿತಾ ರೆಡ್ಡಿ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಠಾಣಾ ಜಾಮೀನು ಮೇಲೆ ಬಿಡುಗಡೆ ಸಹ ಮಾಡಿದ್ದಾರೆ.

‘ಗಲಾಟೆ ಸಂಬಂಧ ಸಂಯುಕ್ತ ಅವರು ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್‌ ದಾಖಲಾಗಿತ್ತು. ಇದೀಗ ಕವಿತಾ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಇವರು ಕಾಂಗ್ರೆಸ್ ಕಾರ್ಯಕರ್ತರೆಂದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

" ಸಂಯುಕ್ತ ಹೆಗಡೆ ಅವರು ನಿತ್ಯವೂ ಉದ್ಯಾನದಲ್ಲಿ ವ್ಯಾಯಾಮ ಮಾಡಿಕೊಂಡು ಹೋಗುತ್ತಿದ್ದರು. ಶುಕ್ರವಾರ ಸಂಜೆ 5 ಗಂಟೆಯಲ್ಲಿ ಸ್ನೇಹಿತರ ಜತೆ ವ್ಯಾಯಾಮ ಮಾಡುತ್ತಿದ್ದರು. ಅಗರ ಕೆರೆ ಸಮಿತಿ ಸದಸ್ಯೆ ಕವಿತಾ ರೆಡ್ಡಿ, ಅನಿಲ್ ರೆಡ್ಡಿ ಹಾಗೂ ಇತರರು, 'ಸಾರ್ವಜನಿಕವಾಗಿ ತುಂಡು ಬಟ್ಟೆ ಧರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದೀರಿ' ಎಂದು ಅವಾಚ್ಯವಾಗಿ ನಿಂದಿಸಿ, ಸಂಯುಕ್ತ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಸಂಗತಿ ಸಂಯುಕ್ತ ಅವರ ದೂರಿನಲ್ಲಿದೆ".

‘ಡ್ರಗ್ಸ್ ಸೇವಿಸಿ ವ್ಯಾಯಾಮಕ್ಕೆ ಉದ್ಯಾನಕ್ಕೆ ಬಂದಿದ್ದೀರಿ’ ಎಂದು ಆರೋಪಿಗಳು ನಿಂದಿಸಿದ್ದರು. ಗಲಾಟೆ ದೃಶ್ಯವನ್ನು ಸಂಯುಕ್ತ ಅವರು ವಿಡಿಯೊ ಮಾಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದೇ ವಿಡಿಯೊವನ್ನು ಪುರಾವೆಯಾಗಿ ಪರಿಗಣಿಸಲಾಗಿದೆ. ತಲೆಮರೆಸಿಕೊಂಡಿರುವ ಅನಿಲ್ ರೆಡ್ಡಿ ಮತ್ತು ಇತರರಿಗಾಗಿ ಹುಡುಕಾಟ ನಡೆದಿದೆ’ ಎಂದೂ ಪೊಲೀಸರು ತಿಳಿಸಿದರು.

 
 
 
 

 
 
 
 
 
 
 
 
 
 
 

A post shared by Samyuktha Hegde (@samyuktha_hegde) on

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು