ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಸ್ಟಿಕ್ಕರ್ ನುಂಗಿದ ಮಗು: ಅಪಾಯದಿಂದ ಪಾರು

Last Updated 23 ಜೂನ್ 2021, 3:06 IST
ಅಕ್ಷರ ಗಾತ್ರ

ಬೆಂಗಳೂರು: ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಒಂದು ವರ್ಷದ ಮಗುವೊಂದು ಅಲಂಕಾರಿಕ ಪಾಸ್ಟಿಕ್ ಸ್ಟಿಕ್ಕರ್‌ ನುಂಗಿದ ಘಟನೆ ನಗರದಲ್ಲಿ ನಡೆದಿದೆ.

ಮಾರತಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯ ವೈದ್ಯರು ಬ್ರಾಂಕೋಸ್ಕೋಪಿ ಮೂಲಕ ಮಗುವಿನ ಶ್ವಾಸಕೋಶಕ್ಕೆ ಅಂಟಿಕೊಂಡಿದ್ದ ಸ್ಟಿಕ್ಕರ್ ಅನ್ನು ಹೊರ ತೆಗೆದಿದ್ದಾರೆ. ಇದರಿಂದಾಗಿ ಮಗು ಅಪಾಯದಿಂದ ಪಾರಾಗಿದೆ.

ಪ್ಲಾಸ್ಟಿಕ್ ಸ್ಟಿಕ್ಕರ್ ನುಂಗಿದ್ದ ಮಗುವಿಗೆ ಕೆಲ ಸಮಯದ ನಂತರ ಕೆಮ್ಮು ಕಾಣಿಸಿಕೊಂಡಿತ್ತು. ಉಸಿರಾಡುವಾಗ ಜೋರಾಗಿ ಸದ್ದು ಕೇಳಿಸುತ್ತಿತ್ತು. ಪಾಲಕರು ಮಗುವನ್ನು ಶಿಶುಕಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕೆ.ಆರ್. ಭರತ್ ರೆಡ್ಡಿ ಬಳಿ ಕರೆದೊಯ್ದು, ತಪಾಸಣೆಗೆ ಒಳಪಡಿಸಿದರು. ವೈದ್ಯರು ಮಗುವಿಗೆ ಬ್ರಾಂಕೋಸ್ಕೋಪಿ ನಡೆಸಿದಾಗ ಶ್ವಾಸಕೋಶದ ಭಾಗದಲ್ಲಿ ಹಸಿರು ಮತ್ತು ಹಳದಿ ಬಣ್ಣದ ವಸ್ತು ಅಂಟಿಕೊಂಡಿರುವುದು ಕಾಣಿಸಿಕೊಂಡಿತು. ರಿಜಿಡ್ ಬ್ರಾಂಕೋಸ್ಕೋಪಿ ನಡೆಸಲು ಅ‌ಲ್ಲಿನ ವೈದ್ಯರು ಮಗುವನ್ನು ರೈನ್ ಬೋ ಮಕ್ಕಳ ಆಸ್ಪತ್ರೆಗೆ ಶಿಫಾರಸು ಮಾಡಿದರು.

‘ರಿಜಿಡ್ ಬ್ರಾಂಕೋಸ್ಕೋಪಿ ಮಾಡಿ ವಸ್ತುವನ್ನು ಹೊರತೆಗೆದೆವು. ಗಾಳಿ ಕೊಳವೆಯ ಬಲ ಭಾಗಕ್ಕೆ ಅಂಟಿಕೊಂಡಿದ್ದ ವಸ್ತುವು ಸಣ್ಣ ಪ್ರಮಾಣದ ಹಾನಿಯನ್ನುಂಟು ಮಾಡಿತ್ತು. ಮಗುವನ್ನು ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು’ ಎಂದು ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಆಂಟೋನಿ ರಾಬರ್ಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT