ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕಂಟೈನ್‌ಮೆಂಟ್‌ ವಾರ್ಡ್‌ಗಳ ಸಂಖ್ಯೆ 24ಕ್ಕೆ ಹೆಚ್ಚಳ

Last Updated 5 ಮೇ 2020, 14:06 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಳವಾರ ಮತ್ತೆ ನಾಲ್ವರಲ್ಲಿ ಕೋವಿಡ್‌ 19 ಸೋಂಕು ಪತ್ತೆಯಾಗಿದ್ದು, ಈ ರೋಗಿಗಳ ಸಂಖ್ಯೆ 157ಕ್ಕೆ ಏರಿಕೆಯಾಗಿದೆ. ಜತೆಗೆ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಹೊಂದಿರುವ ವಾರ್ಡ್‌ಗಳ ಸಂಖ್ಯೆ 24ಕ್ಕೆ ಹೆಚ್ಚಳವಾಗಿದೆ.

198 ವಾರ್ಡ್‌ಗಳ ಪೈಕಿ 151 ವಾರ್ಡ್‌ಗಳಲ್ಲಿ ಈಗಲೂ ಕೋವಿಡ್‌ 19 ಸೋಂಕಿನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಮಂಗಳವಾರ ಬೇಗೂರು, ಶಿವಾಜಿನಗರ ಹಾಗೂ ಬಿಟಿಎಂ ಬಡಾವಣೆ ವಾರ್ಡ್‌ಗಳಲ್ಲಿ ಹೊಸತಾಗಿ ಸೋಂಕು ಕಂಡು ಬಂದಿದ್ದು, ಈ ಪ್ರದೇಶಗಳನ್ನು ಕಂಟೈನ್‌ಮೆಂಠ್‌ ವಲಯಗಳು ಎಂದು ಬಿಬಿಎಂಪಿ ಘೋಷಿಸಿದೆ. ದಾಸರಹಳ್ಳಿ ಹಾಗೂ ಯಲಹಂಕ ವಲಯಗಳ ಯಾವುದೇ ವಾರ್ಡ್‌ಗಳಲ್ಲೂ ಈಗ ಕಂಟೈನ್‌ಮೆಂಟ್‌ ಪ್ರದೇಶಗಳಿಲ್ಲ.

ಸೋಂಕಿತರಲ್ಲಿ 27 ಮಹಿಳೆಯರು ಸೇರಿದಂತೆ 75 ಮಂದಿ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ. ಈ ರೋಗ ಕಂಡು ಬಂದವರಲ್ಲಿ ಇಬ್ಬರು ಮಹಿಳೆಯರೂ ಸೇರಿ ಏಳು ಮಂದಿ (ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರು) ಮೃತಪಟ್ಟಿದ್ದಾರೆ.

ಕೋವಿಡ್‌ 19 ರೋಗಿಗಳ ಜೊತೆ ನೇರ ಸಂಪರ್ಕ ಹೊಂದಿದ್ದ 1,085 ಮಂದಿಗೆ ಕ್ವಾರಂಟೈನ್‌ಗೆ (ಪ್ರತ್ಯೇಕವಾಸಕ್ಕೆ) ಶಿಫಾರಸು ಮಾಡಲಾಗಿತ್ತು. ಅವರಲ್ಲಿ623 ಮಂದಿ ಪ್ರತ್ಯಾಕವಾಸವನ್ನು ಪೂರ್ಣಗೊಳಿಸಿದ್ದಾರೆ. ಸೋಂಕಿತರ ಜೊತೆ ಪರೋಕ್ಷ ಸಂಪರ್ಕ ಹೊಂದಿದ್ದ 4,713 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದ್ದು, 3,916 ಮಂದಿ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ.

ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಹೊಂದಿರುವ ವಾರ್ಡ್‌ಗಳು

ವಲಯ; ಒಟ್ಟು ವಾರ್ಡ್‌ಗಳು; ವಾರ್ಡ್‌

ಬೊಮ್ಮನಹಳ್ಳಿ; 3; ಬಿಲೇಕಹಳ್ಳಿ, ಹೊಂಗಸಂದ್ರ, ಬೇಗೂರು

ಮಹದೇವಪುರ; 1; ಹಗದೂರು

ಪೂರ್ವ; 6; ರಾಧಾಕೃಷ್ಣ ದೇವಸ್ಥಾನ, ಮಾರುತಿ ಸೇವಾನಗರ, ರಾಮಸ್ವಾಮಿ ಪಾಳ್ಯ, ಪುಲಿಕೇಶಿನಗರ, ಶಿವಾಜಿನಗರ, ವಸಂತನಗರ

ದಕ್ಷಿಣ; 8; ಸುಧಾಮನಗರ; ಹೊಸಹಳ್ಳಿ, ಹಂಪಿನಗರ; ಬಾಪೂಜಿನಗರ, ದೀಪಾಂಜಲಿ ನಗರ; ಕರಿಸಂದ್ರ; ಭೈರಸಂದ್ರ; ಬಿಟಿಎಂ ಬಡಾವಣೆ

ಪಶ್ಚಿಮ; 4; ಪಾದರಾಯನಪುರ, ಜಗಜೀವನರಾಮನಗರ, ಛಲವಾದಿಪಾಳ್ಯ, ಕೆ.ಆರ್‌.ಮಾರುಕಟ್ಟೆ

ಆರ್‌.ಆರ್‌.ನಗರ; 2; ಯಶವಂತಪುರ; ಆರ್‌.ಆರ್‌.ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT