ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕಲಿಸಿದ ಹೊಸ ಪಾಠ: ಆನ್‌ಲೈನ್‌ನಲ್ಲಿ ಕ್ಲಾಸ್‌!

Last Updated 31 ಮಾರ್ಚ್ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ರಜೆ’ಯಲ್ಲಿ ಹಾಯಾಗಿ ಆಟವಾಡಿಕೊಂಡಿರೋಣ ಎಂದುಕೊಂಡಿದ್ದ ಹತ್ತನೇ ತರಗತಿ ಮತ್ತು ಪಿಯುಸಿ ಮಕ್ಕಳಿಗೆ, ಟ್ಯುಟೋರಿಯಲ್‌ನವರು ಆನ್‌ಲೈನ್‌ನಲ್ಲಿ ಟ್ಯೂಷನ್‌ ಶುರು ಮಾಡಿದ್ದಾರೆ.

ಕೆಲವರಿಗೆ ಇದು ಹೊಸದು. ಮಕ್ಕಳಿಗೆ ಆ ಹೊಸ ಪಾಠದ ಶೈಲಿಯೂ ಖುಷಿ ಕೊಡುತ್ತಿದೆ.

21 ದಿನಗಳ ‘ಲಾಕ್‌ಡೌನ್‌‘ ಇಲ್ಲದಿದ್ದರೆ, ಇಷ್ಟು ಹೊತ್ತಿಗೆ 2ನೇ ವರ್ಷಕ್ಕೆ ಕಾಲಿಡುವ ಪಿಯು ವಿದ್ಯಾರ್ಥಿಗಳಿಗೆ ಟ್ಯೂಷನ್‌ಗಳು ಆರಂಭವಾಗುತ್ತಿದ್ದವು. ಅಷ್ಟೇ ಅಲ್ಲ, 2ನೇ ಪಿಯುಸಿ ಪರೀಕ್ಷೆ ಬರೆದಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ಪರೀಕ್ಷಾ ಪೂರ್ವತಯಾರಿ ತರಗತಿಗಳು ಭರದಿಂದ ನಡೆಯುತ್ತಿದ್ದವು.

ಆದರೆ ದಿಗ್ಬಂಧನದ ಪರಿಣಾಮದಿಂದ ವಿದ್ಯಾರ್ಥಿಗಳು ಟುಟ್ಯೂರಿಯಲ್‌ಗೆ ಬಂದು ಕಲಿಯಲು ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದ, ಶಿಕ್ಷಕರು ‘ಝೂಮ್’ ನಂತಹ ಕೆಲವು ಮೊಬೈಲ್ ಅಪ್ಲಿಕೇಷನ್ ಬಳಸಿಕೊಂಡು, ಅದರ ಮೂಲಕ ಆನ್‌ಲೈನ್ ಟ್ಯೂಷನ್ ಮಾಡುತ್ತಿದ್ದಾರೆ.

ಈಗಾಲೇ 10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ಪಾಠ ಆರಂಭವಾಗಿದೆ. ಮನೆಯಲ್ಲೇ ಕುಳಿತು ಪಾಠ ಕೇಳುತ್ತಿರುವವಿದ್ಯಾರ್ಥಿಗಳಿಗೆ ನಿಜಕ್ಕೂ ಇದೊಂದು ಹೊಸ ಅನುಭವ.‘ಟ್ಯೂಷನ್‌ಗಾಗಿ ಪ್ರತಿದಿನಶೇಷಾದ್ರಿಪುರದಿಂದ ಮಲ್ಲೇಶ್ವರಕ್ಕೆ ಹೋಗಿ ಬರುವ ಜಂಜಾಟ ತಪ್ಪಿತು’ ಎನ್ನುವುದು10ನೇ ತರಗತಿ ವಿದ್ಯಾರ್ಥಿನಿ ವರ್ಷಿಣಿಗೆ ಖುಷಿ ತಂದಿದೆ.

ಅಲ್ಕಾ ಪಂಡಿತ್‌ ಮತ್ತು ಅವರ ಪತಿ ‘ಗೊಟು ಮಿಟಿಂಗ್‌ ಪೋರ್ಟಲ್‌’ ಬಳಸಿ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪಾಠ ಮಾಡುತ್ತಿದ್ದಾರೆ. ಅಂದಾಜು 20 ವಿದ್ಯಾರ್ಥಿಗಳಿಗೆ ಆನ್‌ಲೈನ್‌ಲ್ಲಿ ಪಾಠ ಹೇಳುತ್ತಿದ್ದಾರೆ. ಉಮಾ ಕಾನಿಟ್ಕರ್‌ ಕೂಡ ಆನ್‌ಲೈನ್‌ನಲ್ಲಿ ಗಣಿತ ಟ್ಯೂಷನ್‌ ನಡೆಸುತ್ತಿದ್ದಾರೆ.ಇವರೆಲ್ಲ ಆನ್‌ಲೈನ್‌ನಲ್ಲಿ ಪಾಠ ಮಾಡುತ್ತಿರುವುದು ಇದೇ ಮೊದಲು.

‘ಈಗೆಲ್ಲ ಸಾಕಷ್ಟು ತಂತ್ರಜ್ಞಾನ ಮುಂದುವರಿದಿದೆ. ಮೊಬೈಲ್‌ನಲ್ಲಿ ಸಾಕಷ್ಟು ಆ್ಯಪ್‌ಗಳಿವೆ. ಎಲ್ಲ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌ಗಳಿವೆ. ಮನೆಗಳಲ್ಲಿ ಕಂಪ್ಯೂಟರ್‌ಗಳಿವೆ. ಹೀಗಾಗಿ ಯಾರಿಗೂ ಸಮಸ್ಯೆ ಆಗಲ್ಲ ಎಂದುಕೊಂಡು ಆನ್‌ಲೈನ್‌ನಲ್ಲಿ ಕ್ಲಾಸ್‌ ತೆಗೆದುಕೊಳ್ಳುವ ನಿರ್ಧಾರ ಮಾಡಿದೆವು. ಕೊರೊನಾ ರಜೆ ನಮಗೂ ತಂತ್ರಜ್ಞಾನ ಉಪಯೋಗಿಸುವ ಪಾಠ ಕಲಿಸಿತು ನೋಡಿ’ ಎಂದು ಪಂಡಿತ್‌ ದಂಪತಿ ತಮಾಷೆ ಮಾಡುತ್ತಾರೆ.

ನೃತ್ಯ, ಸಂಗೀತವೂ ಆನ್‌ಲೈನ್‌
ಇದೇ ಮೇ ತಿಂಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಜೂನಿಯರ್, ಸೀನಿಯರ್ ಪರೀಕ್ಷೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕೆಲವು ಡಾನ್ಸ್‌ ಮತ್ತು ಸಂಗೀತ ಸಂಸ್ಥೆಗಳೂ ವಿದ್ಯಾರ್ಥಿಗಳಿಗೆ ಆನ್‌ಲೈನ್‌ಲ್ಲಿ ಪಾಠ ಆರಂಭಿಸಿದ್ದಾರೆ. ನಾಟ್ಯ ಇನ್‌ಸ್ಟಿಟ್ಯೂಟ್ ಆಫ್‌ ಕಥಕ್‌ ಆ್ಯಂಡ್‌ ಕೊರಿಯೊಗ್ರಫಿ ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದೆ. ಇಂಥದ್ದೊಂದು ಪ್ರಯತ್ನ ಇದೇ ಮೊದಲು ಎನ್ನುತ್ತಾರೆ ಸಂಸ್ಥೆಯರಮ್ಯಾ ನಾಗರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT