ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಸ್ಕ್‌ ಧರಿಸಿದರೆ ಕೊರೊನಾ ಮಾರು ದೂರ’

ಹೊರರಾಜ್ಯದವರನ್ನು ತಡೆದಿದ್ದರೆ ಸೋಂಕು ಮತ್ತಷ್ಟು ನಿಯಂತ್ರಣ: ಮುಖ್ಯಮಂತ್ರಿ
Last Updated 18 ಜೂನ್ 2020, 22:08 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗುರುವಾರ ಮಾಸ್ಕ್‌ ದಿನ ಆಚರಿಸಲಾಯಿತು. ಸಾರ್ವಜನಿಕರಿಗೆ ಮಾಸ್ಕ್‌ ವಿತರಿಸುವ ಜೊತೆಗೆ, ಪಾದಯಾತ್ರೆ, ಜಾಥಾ ನಡೆಸುವ ಮೂಲಕ ಸರ್ಕಾರದ ವಿವಿಧ ಇಲಾಖೆಗಳು, ಸಂಘ–ಸಂಸ್ಥೆಗಳು ಜನಜಾಗೃತಿ ಮೂಡಿಸುವ ಕೆಲಸ ಮಾಡಿದವು.

ವಿಧಾನಸೌಧದ ಎದುರು ಗುರುವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ರಾಜ್ಯದಲ್ಲಿ ಕೋವಿಡ್‌–19 ನಿಯಂತ್ರಣದಲ್ಲಿದೆ. ಹೊರ ರಾಜ್ಯದಿಂದ ಬರುವವರನ್ನು ತಡೆಯಲು ನಾವು ಯಶಸ್ವಿಯಾಗಿದ್ದರೆ, ಸೋಂಕನ್ನು ಮತ್ತಷ್ಟು ನಿಯಂತ್ರಿಸಬಹುದಿತ್ತು’ ಎಂದರು.

ವಿಧಾನಸೌಧದಿಂದ ಕೆ.ಆರ್. ವೃತ್ತದವರೆಗೆ ಪಾದಯಾತ್ರೆ ನಡೆಯಿತು. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಎಸ್‌.ಸುರೇಶ್‌ ಕುಮಾರ್‌, ಕೆ. ಸುಧಾಕರ್, ಎಸ್.ಟಿ. ಸೋಮಶೇಖರ್, ಆರ್. ಅಶೋಕ, ಸಿ.ಟಿ. ರವಿ, ಹಿರಿಯ ಕ್ರಿಕೆಟಿಗ ಅನಿಲ್‌ ಕುಂಬ್ಳೆ, ನಟರಾದ ಪುನೀತ್‌ ರಾಜಕುಮಾರ್, ರಾಗಿಣಿ ಪಾಲ್ಗೊಂಡರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಾಥಾ:ಕಂದಾಯ, ಆರೋಗ್ಯ, ಸಮಾಜಕಲ್ಯಾಣ, ಆಹಾರ ಮತ್ತು ಸರಬರಾಜು ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಸಿಬ್ಬಂದಿ ಮತ್ತು ಅಧಿಕಾರಿಗಳು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ನೇತೃತ್ವದಲ್ಲಿ ಜಾಥಾ ನಡೆಸಿದರು. ಕಂದಾಯ ಭವನದಿಂದ ಹೊರಟ ಜಾಥಾ ಕೆಂಪೇಗೌಡ ರಸ್ತೆಯಲ್ಲಿ ಸಾಗಿತು.

ಜಿಲ್ಲಾ ವೈದ್ಯಾಧಿಕಾರಿ ಡಾ. ಗುಳೂರು ಶ್ರೀನಿವಾಸ, ದಕ್ಷಿಣ ವಲಯ ಉಪವಿಭಾಗಾಧಿಕಾರಿ ಡಾ ಎಂ.ಜಿ. ಶಿವಣ್ಣ ಭಾಗವಹಿಸಿದ್ದರು.

ಬೆಂಗಳೂರು ವಿವಿ:ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್‌ ನೇತೃತ್ವದಲ್ಲಿ ಮಾಸ್ಕ್‌ ದಿನ ಆಚರಿಸಲಾಯಿತು.

ಮಾಸ್ಕ್‌ ಬಳಕೆಯ ಮಹತ್ವ ಕುರಿತು ವಿಶ್ವವಿದ್ಯಾಲಯದಎನ್ಎಸ್ಎಸ್ ಘಟಕಗಳ ಸಂಯೋಜಿತ ಕಾಲೇಜುಗಳಿಗೆ ಹಾಗೂ ಎಲ್ಲ ವಿಭಾಗಗಳಿಗೆ ತಿಳಿಸಲಾಯಿತು.

ಕೆಎಸ್‌ಆರ್‌ಟಿಸಿ:ನಿಗಮದ ಎಲ್ಲ ವಿಭಾಗಗಳಲ್ಲಿ ಗುರುವಾರ ಮಾಸ್ಕ್‌ ದಿನ ಆಚರಿಸಲಾಯಿತು. ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಿಗಮದ ಕಾರ್ಯಾಗಾರದಲ್ಲಿಯೇ ತಯಾರಿಸಿರುವ ಮಾಸ್ಕ್‌ಗಳನ್ನು ಸಿಬ್ಬಂದಿಗೆ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT