ಬೆಂಗಳೂರು: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪ್ರಕರಣಗಳ ವಿಚಾರಣೆ, ಕೋರ್ಟ್ ಸಿಬ್ಬಂದಿ, ಕಕ್ಷಿದಾರರು ಮತ್ತು ಸಂದರ್ಶಕರಿಗೆ ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಹೈಕೋರ್ಟ್ ಕೈಗೊಂಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ, ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ಅನ್ವಯವಾಗುವಂತೆ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಭಾನುವಾರ ಹೊರಡಿಸಿದ್ದಾರೆ.

ಮಾಹಿತಿ ಏನಿದೆ?

*ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳು ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಬೇಕು.

*ಪ್ರಕರಣಗಳನ್ನು ಎಂದಿನಂತೆ ವಿಚಾರಣಾ ಪಟ್ಟಿಯಲ್ಲಿ ಪ್ರಕಟಿಸಲಾಗುತ್ತದೆ. ಈ ಪೈಕಿ ತುರ್ತು ಪ್ರಕರಣಗಳೆಂದು ವಕೀಲರು ಹಾಗೂ ಅರ್ಜಿದಾರರು ತಿಳಿಸಿದ ಸಂದರ್ಭದಲ್ಲಿ ವಿವೇಚನೆ ಮೇರೆಗೆಕೋರ್ಟ್‌ಗಳು ನಿರ್ಧಾರ ಕೈಗೊಳ್ಳಲಿವೆ.

*ಇತರೆ ಪ್ರಕರಣಗಳನ್ನು ಎರಡೂ ಕಡೆಯ ಕಕ್ಷಿದಾರರ ಒಪ್ಪಿಗೆ ಮೇರೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು. ನ್ಯಾಯಾಲಯ ತನ್ನ ವಿವೇಚನೆ ಮೇರೆಗೆ ಮುಂದಿನ ವಿಚಾರಣಾ ದಿನ ನಿಗದಿಪಡಿಸಲಿದೆ.

*ಆರೋಗ್ಯ ಇಲಾಖೆಯ ಸಲಹೆ– ಸೂಚನಾ ಫಲಕಗಳನ್ನು ನ್ಯಾಯಾಲಯ ಆವರಣದ ಮುಖ್ಯ ಸ್ಥಳಗಳಲ್ಲಿ ಪ್ರದರ್ಶಿಸಬೇಕು.ಕೋರ್ಟ್ ಸಿಬ್ಬಂದಿ, ವಕೀಲರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು.

*ಕೊರೊನಾ ವೈರಸ್ ಸೋಂಕು ಲಕ್ಷಣ ಕಂಡುಬಂದರೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿ ಸಬೇಕು.ತುರ್ತು ಪ್ರಕರಣಗಳಲ್ಲಿ ಸಹಾ ಯವಾಣಿ – 104 ಸಂಪರ್ಕಿಸಬೇಕು.

*ಹೈಕೋರ್ಟ್‌ಗೆ ಭೇಟಿ ನೀಡುವ ಸಂದರ್ಶಕರು (ವಕೀಲರನ್ನು ಹೊರತು ಪಡಿಸಿ) ಮಂಗಳವಾರದಿಂದ (ಮಾ. 17 ) ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪ ಡಬೇಕು. ಕೋರ್ಟ್ ಸಿಬ್ಬಂದಿಗೆ ಕಚೇರಿಗಳಲ್ಲಿ ಸ್ಕೀನಿಂಗ್ ಮಾಡಲಾಗುತ್ತದೆ.

*ಜಿಲ್ಲಾ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳು ತುರ್ತು ಪ್ರಕರಣಗಳನ್ನು ಮಾತ್ರವೇ ವಿಚಾರಣೆ ನಡೆಸಬೇಕು. ಕಡ್ಡಾಯವಿದ್ದರೆ ಮಾತ್ರ ಕಕ್ಷಿದಾರರನ್ನು ವಿಚಾರಣೆಗೆ ಹಾಜರಾಗಲು ಸೂಚಿಸಬೇಕು. ಇಲ್ಲವಾದರೆ ಕಕ್ಷಿದಾರರ ಹಾಜರಾತಿಗೆ ವಿನಾಯಿತಿ ನೀಡಬೇಕು.

*ಕೋರ್ಟ್, ಕಾನೂನು ಸೇವೆಗಳ ಪ್ರಾಧಿಕಾರ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಜನರು ಸೇರುವ ಕಾರ್ಯಕ್ರಮಗಳಿಂದ ದೂರ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.