ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ರಕ್ಷಣಾ ಕವಚ ಅಭಿವೃದ್ಧಿ

Last Updated 16 ಜುಲೈ 2020, 21:58 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿನಿಂದ ರಕ್ಷಣೆ ಮಾಡಿಕೊಳ್ಳಲು ಸಹಾಯಕವಾಗುವ ಕೋವಿಡ್‌ ರಕ್ಷಣಾ ಕವಚವನ್ನು ಅಭಿವೃದ್ಧಿಪಡಿಸಲಾಗಿದೆ.

ಮುಖಗವಸು ಧರಿಸಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿದ್ದಾರೆ. ಅದೇ ರೀತಿ, ಆಸ್ಪ‍ತ್ರೆಗಳಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಕೋವಿಡ್ ಪೀಡಿತರಾಗುತ್ತಿದ್ದಾರೆ. ಹಾಗಾಗಿ ಕಿಡಕಿ ಶಾಪ್ ಹೆಸರಿನ ಮಳಿಗೆಯೊಂದು ಸಂಪೂರ್ಣ ಮುಖವನ್ನು ಆವರಿಸುವ ‘ಕೋವಿಡ್ ಕವಚ್’ ಹೆಸರಿನ ಸುರಕ್ಷತಾ ಕವಚ ಸಿದ್ಧಪಡಿಸಿದೆ.

‘ಜನರ ಹಿತದೃಷ್ಟಿಯಿಂದ ಮೇಡ್ ಇನ್‌ ಇಂಡಿಯಾದಡಿ ಈ ಕವಚವನ್ನು ಅಭಿವೃದ್ಧಿಪಡಿಸಿದ್ದೇವೆ.ಪ್ರಯೋಗಾಲಯದ ಮಾನ್ಯತೆ ದೊರೆತಿದೆ. ಮುಖಗವಸು ಧರಿಸುವ ಅಗತ್ಯ ಇಲ್ಲ. ಉಸಿರಾಟದ ಸಮಸ್ಯೆ ಕೂಡ ಕಾಣಿಸಿಕೊಳ್ಳುವುದಿಲ್ಲ’ ಎಂದು ಅಭಿವೃದ್ಧಿಪಡಿಸಿದ ಸಂತೋಷ್ ತಿಳಿಸಿದರು.

ಸಂಪರ್ಕಕ್ಕೆ ವಾಟ್ಸ್‌ ಆ್ಯಪ್ ಸಂ: 9849169918

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT