ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಬಳಿಕ ಬಂತು ಕೋವಿಡ್‌ ವರದಿ: ಕುಟುಂಬದ ಸದಸ್ಯರ ಆಕ್ರೋಶ

Last Updated 1 ಜುಲೈ 2020, 22:03 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪರೀಕ್ಷಾ ವರದಿ ಬಾರದ ಹಿನ್ನೆಲೆಯಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ 45 ವರ್ಷದ ವ್ಯಕ್ತಿ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ನ್ಯುಮೋನಿಯಾದಿಂದ ಬಳಲು ತ್ತಿದ್ದ ವ್ಯಕ್ತಿ ಕೋವಿಡ್ ಪರೀಕ್ಷೆಯ ವರದಿಗಾಗಿ ನಾಲ್ಕು ದಿನಗಳು ಕಾದು ಮಂಗಳವಾರ ಮೃತಪಟ್ಟಿ ದ್ದಾರೆ. ಅವರು ಮೃತಪಟ್ಟ 10 ಗಂಟೆ ಬಳಿಕ ಪರೀಕ್ಷಾ ವರದಿ ಬಂದಿದೆ.ಕೊರೊನಾ ಸೋಂಕಿನ ಲಕ್ಷಣ ಗಳು ಕಾಣಿಸಿಕೊಂಡಿದ್ದರಿಂದ ಅವರು ಕೋವಿಡ್ ಪರೀಕ್ಷೆ ಮಾಡಿಸಿ ಕೊಂಡಿದ್ದರು.ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ತೆರಳಿದ ಅವರಿಗೆ ಅಲ್ಲಿನ ವೈದ್ಯರು ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಲು ಕಳೆದ ಶನಿವಾರ ಶಿಫಾರಸು ಮಾಡಿದ್ದರು. ’ವರದಿ ಬಾರದ ಹಿನ್ನೆಲೆಯಲ್ಲಿ ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ಒದಗಿಸಿಲ್ಲ‘ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

‘ಆಸ್ಪತ್ರೆಯಲ್ಲಿ 96 ಗಂಟೆಗಳ ಕಾಲ ನೋವಿನಿಂದ ಬಳಲಿದ್ದಾರೆ. ನ್ಯುಮೋನಿಯಾ ಸಮಸ್ಯೆ ಇರು ವುದು ತಿಳಿದಿದ್ದರೂ ಸೂಕ್ತ ಆರೈಕೆ ಮಾಡಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಕ್ಕಲ್ಲಿ ಅವರನ್ನು ಉಳಿಸಿ ಕೊಳ್ಳಬಹುದಾಗಿತ್ತು. ಆಸ್ಪತ್ರೆಯವರು ಮಾತ್ರೆ ಗಳನ್ನೂ ನೀಡಿಲ್ಲ’ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯ ಕೀಯ ಅಧೀಕ್ಷಕ ಡಾ.ಬಿ.ಆರ್.ವೆಂಕಟೇಶಯ್ಯ, ‘ರಾಜಾಜಿ ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ರೋಗಿಯ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿತ್ತು. ಬೆಂಗಳೂರು ವೈದ್ಯಕೀಯ ಕಾಲೇಜು, ನಿಮ್ಹಾನ್ಸ್‌ ಪ್ರಯೋಗಾಲಯಗಳು ಸ್ಥಗಿತವಾಗಿ ದ್ದರಿಂದ ಮಾದರಿಗಳನ್ನು ಬೇರೆ ಪ್ರಯೋಗಾಲಯಕ್ಕೆ ಕಳುಹಿಸ ಬೇಕಾಯಿತು. ಹಾಗಾಗಿ, ವರದಿ ಬರುವುದು ವಿಳಂಬವಾಯಿತು. ಆದರೂ, ನಾವು ರೋಗಿಗೆ ಸೂಕ್ತ ಆರೈಕೆ ಮಾಡಿದ್ದೇವೆ. ಆಸ್ಪತ್ರೆಯಲ್ಲಿ 360 ಬೆಡ್‌ಗಳಿದ್ದು, ಅದರಲ್ಲಿ 95 ಬೆಡ್‌ಗಳನ್ನು ಕೋವಿಡ್ ರೋಗಿ ಗಳಿಗೆ ಮೀಸಲಿಡಲಾಗಿದೆ. 6 ಐಸಿಯು ಹಾಸಿಗೆಗಳಿವೆ. ಎಲ್ಲವೂ ಭರ್ತಿಯಾಗಿವೆ’ ಎಂದರು.

ಆಂಬುಲೆನ್ಸ್‌ನಲ್ಲೇ ವ್ಯಕ್ತಿ ಸಾವು
ಮಾಗಡಿ ರಸ್ತೆಯ ವಿದ್ಯಾರಣ್ಯನಗರದ 52 ವರ್ಷದ ವ್ಯಕ್ತಿಯೊಬ್ಬರು ವಿಕ್ಟೋರಿಯಾ ಆಸ್ಪತ್ರೆಗೆ ತೆರಳುವಾಗ ಆಂಬುಲೆನ್ಸ್‌ನಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಅವರಿಗೆ ಕಳೆದ ಭಾನುವಾರ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಕುಟುಂಬದ ಸದಸ್ಯರು ಈ ಮಾಹಿತಿಯನ್ನು ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ

‘ತಂದೆಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅವರು ಆಂಬುಲೆನ್ಸ್ ಕಳುಹಿಸುವುದಾಗಿ ಹೇಳಿದ್ದರು. ಮೂರು ದಿನಗಳಾದರೂ ಕಳಿಸಿರಲಿಲ್ಲ. ತಂದೆಯ ಆರೋಗ್ಯದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿತ್ತು. ನಾವೇ ಆಂಬುಲೆನ್ಸ್ ಸಂಪರ್ಕಿಸಿ, ಮಂಗಳವಾರ ರಾತ್ರಿ ಆಸ್ಪತ್ರೆಗೆ ಕರೆದೊಯ್ದೆವು. ಆದರೆ, ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದರು’ ಎಂದು ಮೃತ ವ್ಯಕ್ತಿಯ ಪುತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT