ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆ: ಜನರಿಗೆ ನೆಗೆಟಿವ್‌–ಪಾಸಿಟಿವ್‌ ಗೊಂದಲ

ಐದಾರು ದಿನಗಳಾದರೂ ಸಿಗುತ್ತಿಲ್ಲ ವರದಿ * ಆರ್‌ಟಿ–ಪಿಸಿಆರ್‌ ಪರೀಕ್ಷೆಯಲ್ಲಿಯೂ ವ್ಯತ್ಯಾಸ
Last Updated 17 ಆಗಸ್ಟ್ 2020, 15:53 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಪತ್ತೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಒಂದೊಂದು ಪರೀಕ್ಷೆಯಲ್ಲಿ ಒಂದೊಂದು ರೀತಿಯ ಫಲಿತಾಂಶ ಬರುತ್ತಿದ್ದು, ನಾಗರಿಕರನ್ನು ಚಿಂತೆಗೀಡು ಮಾಡಿದೆ.

‘ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಕೊರೊನಾ ಸೋಂಕು ವರದಿ ನೆಗೆಟಿವ್‌ ಬಂದಿತ್ತು. ಆದರೆ, ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಎಂದು ವರದಿ ನೀಡಿದರು. ಮೂರು–ನಾಲ್ಕು ದಿನಗಳ ನಂತರ ಬೇರೆ ಲ್ಯಾಬ್‌ನಲ್ಲಿ ಪರೀಕ್ಷಿಸಿದಾಗ ನೆಗೆಟಿವ್ ಎಂದು ತೋರಿಸಿತು. ಫಲಿತಾಂಶದಲ್ಲಿಯೇ ಇಷ್ಟೊಂದು ವ್ಯತ್ಯಾಸ ಬಂದರೆ ನಾವು ಏನು ತಿಳಿದುಕೊಳ್ಳಬೇಕು’ ಎಂದು ವಿಜಯನಗರದ ವ್ಯಕ್ತಿಯೊಬ್ಬರು ಹೇಳಿದರು.

‘ಯಾವುದೇ ಚಿಕಿತ್ಸೆ ಪಡೆಯಬೇಕೆಂದರೂ ಕೊರೊನಾ ವರದಿ ಕೇಳುತ್ತಾರೆ. ಗಂಟಲು ದ್ರವ ಮಾದರಿ ನೀಡಿ ಐದಾರು ದಿನಗಳಾದರೂ ವರದಿ ಬರುವುದಿಲ್ಲ. ಕೊರೊನಾ ಸೋಂಕು ತಗುಲಿದರೆ ಒಂದು ಚಿಂತೆಯಾದರೆ, ಬೇರೆ ಕಾಯಿಲೆಗಳಿದ್ದವರು ಚಿಕಿತ್ಸೆ ಪಡೆಯುವುದೇ ಮತ್ತೊಂದು ಚಿಂತೆಯಾಗಿದೆ’ ಎಂದು ಹೆಸರು ಬಹಿರಂಗಪಡಿಸದ ರೋಗಿಯೊಬ್ಬರು ಹೇಳಿದರು.

‘ನಾನು ಕಳೆದ ಗುರುವಾರ ಪರೀಕ್ಷೆಗೆ ಒಳಪಟ್ಟಿದ್ದೆ. ಸೋಮವಾರ ವರದಿ ನೀಡಬೇಕಾಗಿತ್ತು. ಆದರೆ, ಫಲಿತಾಂಶ ಪೋರ್ಟಲ್‌ಗೆ ಅಪ್‌ಡೇಟ್‌ ಮಾಡಬೇಕು. ಶನಿವಾರ–ಭಾನುವಾರ ಲ್ಯಾಬ್‌ ಟೆಕ್ನಿಷಿಯನ್‌ಗಳು ರಜೆ ಇದ್ದರು.ಎರಡು–ಮೂರು ದಿನಗಳ ನಂತರ ಬನ್ನಿ ಎನ್ನುತ್ತಿದ್ದಾರೆ. ವರದಿ ಬರುವವರೆಗೆ ನಿದ್ದೆಯೇ ಬರುವುದಿಲ್ಲ’ ಎಂದು ವೃದ್ಧರೊಬ್ಬರು ಹೇಳಿದರು.

ಪೋರ್ಟಲ್‌ ಸ್ಥಗಿತ

‘ಐಸಿಎಂಆರ್‌ ಪೋರ್ಟಲ್‌ಗೆ ದತ್ತಾಂಶಗಳನ್ನು ಅಪ್‌ಡೇಟ್‌ ಮಾಡಬೇಕು. ಆದರೆ, ಅದು ಸ್ಥಗಿತಗೊಂಡಿದೆ (ಜಾಮ್‌). ಹೀಗಾಗಿ, ವರದಿ ಬರುತ್ತಿರುವುದು ವಿಳಂಬವಾಗಿದೆ’ ಎಂದು ಪ್ರಯೋಗಾಲಯವೊಂದರ ಪ್ರತಿನಿಧಿ ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT