ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೃದಯ ಸ್ತಂಭನ ಚಿಕಿತ್ಸೆಗೆ ‘ಸಿಪಿಆರ್’ ತರಬೇತಿ

Published : 19 ಆಗಸ್ಟ್ 2022, 22:04 IST
ಫಾಲೋ ಮಾಡಿ
Comments

ಬೆಂಗಳೂರು:ಹೃದಯ ಸ್ತಂಭನಕ್ಕೆ ಒಳಗಾದವರಿಗೆ ತುರ್ತಾಗಿ ಚಿಕಿತ್ಸೆ ಒದಗಿಸುವಿಕೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ‘ಸಿಪಿಆರ್‌’ (ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್) ತರಬೇತಿ ಹಮ್ಮಿಕೊಂಡಿದೆ.

‘ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದಾಗ ಭುಜವನ್ನು ತಟ್ಟಿ, ಉಸಿರಾಟ ಹಾಗೂ ಎದೆಯ ಬಡಿತವನ್ನು ಪರೀಕ್ಷಿಸಬೇಕು. ವ್ಯಕ್ತಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿದ್ದಲ್ಲಿ 108ಕ್ಕೆ ಸಂಪರ್ಕಿಸಿ,‘ಸಿಪಿಆರ್‌’ ನೀಡಬೇಕು. ಬಳಿಕ ಆಂಬುಲೆನ್ಸ್ ಮೂಲಕ ಹೃದಯ ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು. ಸಿಪಿಆರ್ ತರಬೇತಿ ಬಗ್ಗೆ ಸಂಘ–ಸಂಸ್ಥೆಗಳು ನಗರದ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧವನ್ನು ಸಂಪರ್ಕಿಸಬಹುದು’ ಎಂದು ಇಲಾಖೆ ಹೇಳಿದೆ.

‘ನಿಂತಿರುವ ಹೃದಯ ಬಡಿತವನ್ನು ಪುನಃ ಪ್ರಾರಂಭವಾಗುವಂತೆ ಮಾಡುವ ಪ್ರಕ್ರಿಯೆಗೆ ಸಿಪಿಆರ್ ಎಂದು ಕರೆಯಲಾಗುತ್ತದೆ. ಹೃದಯ ಸ್ತಂಭನ ಆದಾಗ ಮೂರರಿಂದ ನಾಲ್ಕು ನಿಮಿಷಗಳಲ್ಲಿಯೇಹೃದಯವನ್ನು ಪುನಶ್ಚೇತನಗೊಳಿಸಬೇಕು. ಹೃದಯ ಬಡಿತ, ಉಸಿರಾಟ ಇದ್ದರೆ ಅದು ಹೃದಯ ಸ್ತಂಭನವಲ್ಲ. ಹೃದಯದ ಮಸಾಜ್‌ನಿಂದ ವ್ಯಕ್ತಿ ಎಚ್ಚರಗೊಂಡ ಬಳಿಕ ಸಿಪಿಆರ್ ಪ್ರಕ್ರಿಯೆ ಸ್ಥಗಿತಗೊಳಿಸಬೇಕು’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

‘ಸಿಪಿಆರ್ ಎನ್ನುವುದು ವೈದ್ಯರು ಮತ್ತು ಶುಶ್ರೂಷಕರಿಗೆ ಸೀಮಿತವಾಗಿಲ್ಲ. ಇದರ ಬಗ್ಗೆ ಜನಸಾಮಾನ್ಯರಿಗೂ ಮಾಹಿತಿ ಇರಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT