ಬುಧವಾರ, ಜುಲೈ 28, 2021
21 °C

ಕೊಲೆ: ಇಬ್ಬರು ಆರೋಪಿಗಳಿಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಯನಗರ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಮಂಗಳವಾರ ಗುಂಡು ಹಾರಿಸಿದ್ದಾರೆ.

ಮಹೇಶ್ ಹಾಗೂ ನವೀನ್ ಗುಂಡೇಟು ತಿಂದ ಆರೋಪಿಗಳು.

‘ಉತ್ತರಹಳ್ಳಿ ಬಳಿಯ ನಾಗಗೌಡನಪಾಳ್ಯದ ಬಳಿ ಘಟನೆ ನಡೆಯಿತು. ಕೊಲೆಗೆ ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆಲು ಇವರನ್ನು ಮಹಜರಿಗೆ ಕರೆದೊಯ್ಯಲಾಗಿತ್ತು’.

‘ಈ ವೇಳೆ ಠಾಣೆಯ ಪಿಎಸ್‍ಐ ಚಂದನ್ ಕಾಳೆ ಮತ್ತು ಎಎಸ್‍ಐ ಲಕ್ಷ್ಮಣಾಚಾರಿ ಮೇಲೆ ಹಲ್ಲೆ ನಡೆಸಿ, ಅಲ್ಲಿಂದ ಪರಾರಿಯಾಗಲು ಆರೋಪಿಗಳು ಯತ್ನಿಸಿದರು. ಶರಣಾಗಲು ಸೂಚಿಸಿದರೂ ತಪ್ಪಿಸಿಕೊಳ್ಳುತ್ತಿದ್ದ ಇಬ್ಬರ ಕಾಲಿಗೂ ಇನ್‌ಸ್ಪೆಕ್ಟರ್‌ ಸುದರ್ಶನ್‌ ಗುಂಡು ಹಾರಿಸಿದರು’. 

‘ಗುಂಡೇಟು ತಿಂದಿದ್ದ ಇಬ್ಬರನ್ನೂ ಆಂಬುಲೆನ್ಸ್‌ ಮೂಲಕ ಜಯನಗರ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು. ಘಟನೆಯಲ್ಲಿ ಇಬ್ಬರು ಸಿಬ್ಬಂದಿಗೂ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದರು.

ತರಕಾರಿ ಖರೀದಿಸಲೆಂದು ಕಳೆದ ಶುಕ್ರವಾರ ಬಂದಿದ್ದ ಲಕ್ಕಸಂದ್ರ ನಿವಾಸಿ ಮದನ್ ಎಂಬುವರನ್ನು ಬನಶಂಕರಿ ದೇವಸ್ಥಾನ ಸಮೀಪ ಮಾರಕಾಸ್ತ್ರಗಳಿಂದ ಹೊಡೆದು, ಕೊಲೆ ಮಾಡಲಾಗಿತ್ತು. ಕೊಲೆಯ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ, ಇತ್ತೀಚೆಗೆ ಹರಿದಾಡಿತ್ತು. ಈ ಸಂಬಂಧ ಜಯನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು