ಬೆಂಗಳೂರು: ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿಸಿ ಕೊಡುವುದಾಗಿ ಮಾಲೀಕರನ್ನು ನಂಬಿಸಿ, ಹಣ ನೀಡದೆ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಸೀಬ್, ಮಹಮ್ಮದ್ ಆಜಂ ಹಾಗೂ ಮಹೀರ್ ಖಾನ್ ಬಂಧಿತರು.
‘ಕಾರುಗಳನ್ನು ಮಾರಾಟ ಮಾಡಿಸಿಕೊಡುತ್ತೇವೆ ಎಂದು ಮಾಲೀಕರಿಂದಐಷಾರಾಮಿ ಕಾರುಗಳನ್ನು ಆರೋಪಿಗಳು ಪಡೆಯುತ್ತಿದ್ದರು. ಮಾಲೀಕರ ಒಪ್ಪಿಗೆ ಇಲ್ಲದೆ, ಬೇರೆಯವರಿಗೆ ಮಾರುತ್ತಿದ್ದರು’ಎಂದು ಪೊಲೀಸರು ತಿಳಿಸಿದರು.
‘ಮಾಲೀಕರಿಗೆ ಹಣ ನೀಡದೆ ವಂಚಿಸುತ್ತಿದ್ದರು ಹಾಗೂ ಹಣ ಕೇಳುವ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದರು. ಕಾರುಗಳ ಮಾರಾಟದಿಂದ ಹಣ ಪಡೆದುಕೊಂಡು ತಲೆಮರೆಸಿಕೊಳ್ಳುತ್ತಿದ್ದರು. ಈ ಸಂಬಂಧ ವೈಯಾಲಿಕಾವಲ್, ಪುಲಿಕೇಶಿ ನಗರ ಹಾಗೂ ಜ್ಞಾನಭಾರತಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು’ ಎಂದರು.
‘ಆರೋಪಿಗಳನ್ನು ಬಂಧಿಸಿ ಚಿತ್ರದುರ್ಗ, ದಾವಣಗೆರೆ, ಭಟ್ಕಳ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಾರಾಟ ಮಾಡಿದ್ದ ₹ 3 ಕೋಟಿ ಬೆಲೆ ಬಾಳುವ 19 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.