ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ವಸ್ತುಗಳಲ್ಲಿ ಡ್ರಗ್ಸ್‌ ಸಾಗಾಟ

ಮಣಿಪುರದ ಮೂವರು ಆರೋಪಿಗಳ ಬಂಧನ
Last Updated 13 ಏಪ್ರಿಲ್ 2021, 4:45 IST
ಅಕ್ಷರ ಗಾತ್ರ

ಬೆಂಗಳೂರು: ಸಾಬೂನು ಬಾಕ್ಸ್‌ ಸೇರಿದಂತೆ ಪ್ಲಾಸ್ಟಿಕ್‌ ವಸ್ತುಗಳ ಮೂಲಕ ನಗರದಲ್ಲಿ ಡ್ರಗ್ಸ್‌ ಸಾಗಾಟ ಮಾಡುತ್ತಿದ್ದ ಮಣಿಪುರದ ಮೂವರು ಆರೋಪಿಗಳನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಾಣಸವಾಡಿಯಲ್ಲಿ ವಾಸವಿದ್ದ ಮೊಹಮ್ಮದ್ ಸಜ್ಜದ್‌ ಖಾನ್ (27), ಕಮ್ಮನಹಳ್ಳಿಯ ಮೊಹಮ್ಮದ್ ಅಜಾಜ್‌ (27) ಹಾಗೂ ಹೆಣ್ಣೂರು ವೃತ್ತದ ಸಪಂ ಸೀತಲ್ ಕುಮಾರ್ ಸಿಂಗ್ (25) ಬಂಧಿತರು.

‘ಠಾಣಾ ವ್ಯಾಪ್ತಿಯ ಕಬ್ಬನ್ ರಸ್ತೆಯ ಬಳಿಆರೋಪಿಗಳು ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು, ಮಾರಾಟ ಮಾಡಲು ಯತ್ನಿಸಿದ್ದರು. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳಿಂದ ₹10 ಲಕ್ಷ ಮೌಲ್ಯದ ಹೆರಾಯಿನ್, ₹50 ಲಕ್ಷ ಮೌಲ್ಯದ 2,800 ಪಿಲ್ಸ್‌ ಮಾತ್ರೆಗಳು, ₹9,500 ನಗದು, 10 ಸಾಬೂನು ಡಬ್ಬಿಗಳು, 170 ಪ್ಲಾಸ್ಟಿಕ್ ಡಬ್ಬಿಗಳು, ಮೂರು ಬ್ಯಾಗ್, ನಾಲ್ಕು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸಜ್ಜದ್‌ ಹಾಗೂ ಅಜಾಜ್‌ ಶಿವಾಜಿನಗರದ ಮಾಂಸದ ಅಂಗಡಿಯಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದರು. ಸೀತಲ್ ಕುಮಾರ್ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT