ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಡೇಟಾಥಾನ್‌: ವಿಜೇತರಿಗೆ ಬಹುಮಾನ

ರಾಜ್ಯ ಪೊಲೀಸ್‌ ಇಲಾಖೆಯ ಕಂಪ್ಯೂಟರ್ ವಿಭಾಗದಿಂದ ಆಯೋಜನೆ
Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯ ಕಂಪ್ಯೂಟರ್ ವಿಭಾಗ ಶನಿವಾರ ಆಯೋಜಿಸಿದ್ದ ‘ಡೇಟಾಥಾನ್‌’ ಸ್ಪರ್ಧೆಯಲ್ಲಿ ಹಲವು ರಾಜ್ಯಗಳ ತಂಡಗಳು ಪಾಲ್ಗೊಂಡು, ವಿವಿಧ ವಿಭಾಗಗಳಲ್ಲಿ ಜಯ ಗಳಿಸಿದವು.

ಪೊಲೀಸ್‌ ಇಲಾಖೆಯಲ್ಲಿ ಈಗಾಗಲೇ ಸಂಗ್ರಹಿಸಲಾಗಿರುವ ಅಪರಾಧ ದತ್ತಾಂಶಗಳನ್ನು ಬಳಸಿಕೊಂಡು ಮುಂದೆ ಆಗಬಹುದಾದ ಅಪರಾಧಗಳನ್ನು ಊಹಿಸುವುದು ಹಾಗೂ ಅವುಗಳು ಯಾವ ಪ್ರದೇಶದಲ್ಲಿ? ಯಾವ ಸಮಯದಲ್ಲಿ ಸಂಭವಿಸುವ ಸಾಧ್ಯತೆ ಎಂದು ಅಂದಾಜಿಸುವ ಸ್ಪರ್ಧೆಯಲ್ಲಿ ಚೆನ್ನೈನ ಸೈರನ್‌ ಸ್ಕ್ವಾಡ್‌ ಈಶ್ವರಿ ಎಂಜಿನಿಯರಿಂಗ್ ಕಾಲೇಜು ಜಯ ಗಳಿಸಿತು.

ಸಂಚಾರ ಅರಿವು ಹಾಗೂ ದಟ್ಟಣೆ ನಿರ್ವಹಣೆ ವಿಭಾಗದಲ್ಲಿ ಚೆನ್ನೈನ ಕೋಡ್‌ ಒನ್‌ ಸೇಂಟ್‌ ಜೋಸೆಫ್‌ ಕಾಲೇಜು, ಪೊಲೀಸ್ ಕಾರ್ಯಕ್ಷಮತೆ ಮತ್ತು ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ಮುಂಬೈನ ಲುಮಿನಾ ಪಿಲೈ ಕಾಲೇಜು ಆಫ್‌ ಎಂಜಿನಿಯರಿಂಗ್‌, ಕಾನೂನು ಜಾರಿಯಲ್ಲಿ ಡೇಟಾ ಗೋಪ್ಯತೆ ವಿಭಾಗದಲ್ಲಿ ಗಾಜಿಯಾಬಾದ್‌ನ ಶೆರಲಾಕ್‌ ಅಜಯ್‌ ಕುಮಾರ್ ಗರ್ಗ್‌ ಎಂಜಿನಿಯರಿಂಗ್‌ ಕಾಲೇಜು ಮತ್ತು ಜಿ.ಎಲ್‌. ಬಜಾಜ್‌ ಇನ್‌ಸ್ಟಿಟ್ಯೂಟ್‌, ಅಪಘಾತ ದತ್ತಾಂಶ ವಿಶ್ಲೇಷಣೆ ವಿಭಾಗದಲ್ಲಿ ನಾಗಾಪುರದ ಯಶ್ವಂತರಾವ್‌ ಚೈವಾನ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪ್ರಶಸ್ತಿ ಪಡೆದುಕೊಂಡಿವೆ. ವಿಜೇತ ತಂಡಕ್ಕೆ ₹ 1 ಲಕ್ಷ ನಗದು ಬಹುಮಾನ ನೀಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT