ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಚೇರಿಗೆ ಡೆಕ್ಕನ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಗುರುವಾರ ಭೇಟಿ ನೀಡಿ, ನಗರದ ಆಡಳಿತ ಮತ್ತು ಪರಿಸರ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.

ರೀಪ್ ಬೆನಿಫಿಟ್ ಟೀಮ್ ಸಹಯೋಗದಲ್ಲಿ ಶೈಕ್ಷಣಿಕ ಪ್ರವಾಸದ ಅಂಗವಾಗಿ, ಶಿಕ್ಷಕರಾದ ಚೈತ್ರಾ ಕಶ್ಯಪ್, ಎನ್. ಆಶಾ ಅವರೊಂದಿಗೆ 40 ವಿದ್ಯಾರ್ಥಿಗಳು ಜಿಬಿಎಗೆ ಭೇಟಿ ನೀಡಿದ್ದರು.

ಜಿಬಿಎ ನಿಯಂತ್ರಣ ಕೊಠಡಿ, ಸಹಾಯವಾಣಿ, ವಾರ್ ರೂಮ್ಗಳಿಗೆ ಭೇಟಿ ನೀಡಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಬರುವ ದೂರುಗಳನ್ನು ಸ್ವೀಕರಿಸಿ, ಅದನ್ನು ಪರಿಹರಿಸುವ ಪ್ರಕ್ರಿಯೆಯನ್ನು ಅರಿತುಕೊಂಡರು. ಅರಣ್ಯ, ಪರಿಸರ, ವಿಪತ್ತು ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ರಾಮಚಂದ್ರನ್ ಅವರಿಂದ ಪರಿಸರ ವಿಭಾಗದ ಸಿಬ್ಬಂದಿಯ ಪ್ರಮುಖ ಕಾರ್ಯ, ನಗರದಲ್ಲಿ ಅವರು ಕೈಗೊಳ್ಳುವ ಉಪಕ್ರಮಗಳ ಮಾಹಿತಿ ಪಡೆದರು.

ನಗರದಲ್ಲಿರುವ ಹಲವು ಸಮಸ್ಯೆಗಳು, ಪರಿಸರ ರಕ್ಷಣೆಯಲ್ಲಿ ನಾಗರಿಕರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಚರ್ಚೆ ನಡೆಸಿದರು. ನಾಗರಿಕರ ಜವಾಬ್ದಾರಿ ಮತ್ತು ಸುಸ್ಥಿರ ಜೀವನದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವಲ್ಲಿ ಈ ಪ್ರವಾಸ ತುಂಬಾ ನೆರವಾಯಿತು ಎಂದು ಶಿಕ್ಷಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.