ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೊದಿಂದ ಸೃಷ್ಟಿಯಾದ ಸಮಸ್ಯೆಯ ನಂತರ ಕಂಪನಿಯೊಂದು ಏಕಸ್ವಾಮ್ಯವಾಗಿ ಬೆಳೆದು ನಿಂತಿದ್ದರ ಪರಿಣಾಮಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.

ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೊ ವಿಮಾನಗಳ ಹಾರಾಟ ರದ್ಧತಿಗೆ ಇಂದಿಗೂ ತೆರೆ ಬಿದ್ದಿಲ್ಲ. ಆದರೆ ಇದರ ನಡುವೆ ಕಂಪನಿಯೊಂದು ಏಕಸ್ವಾಮ್ಯವಾಗಿ ಬೆಳೆದು ನಿಂತಿದ್ದು ಹಾಗೂ ಅದು ಇಡೀ ಉದ್ಯಮವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು ಮತ್ತು ಅದರಿಂದ ಸಾರ್ವಜನಿಕರು ಎದುರಿಸುತ್ತಿರುವ ಅಪಾಯಗಳ ಕುರಿತು ವ್ಯಾಪಕ ಚರ್ಚೆ ಹಾಗೂ ಅವಲೋಕನಗಳು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನಡೆಯುತ್ತಿದೆ.

ದೇಶದ ವಿಮಾನಯಾನ ಕ್ಷೇತ್ರದಲ್ಲಿ ಇಂಡಿಗೊ ಪಾಲು ಮೂರನೇ 2ರಷ್ಟು. ನಿತ್ಯ 2,200 ವಿಮಾನಗಳ ಹಾರಾಟವನ್ನು ಇಂಡಿಗೊ ಹೊಂದಿದೆ. ಪೈಲೆಟ್ಗಳಿಗೆ ಹೆಚ್ಚಿನ ವಿಶ್ರಾಂತಿ ನೀಡಬೇಕೆಂಬ ನಿಯಮವನ್ನು (ಹಲವು ಬೆಳವಣಿಗೆಗಳ ನಂತರ 2025ರ ನ. 1ರಿಂದ ಜಾರಿ) ಸರ್ಕಾರದ ಒಂದು ವರ್ಷ ಹಿಂದೆಯೇ ಜಾರಿಗೆ ತಂದಿದೆ. ಅದಕ್ಕೆ ಪೂರಕ ವ್ಯವಸ್ಥೆ ಮಾಡದ ಕಂಪನಿಯಿಂದಾಗಿ ಹಲವು ವಿಮಾನಗಳು ರದ್ದಾದವು. ದೇಶದ 95 ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಜನರು ಪರದಾಡಿದರು. ಕಂಪನಿಯ ಸ್ಟಾಕ್ ಹಲವು ಪಟ್ಟು ಕುಸಿತ ಕಂಡಿತು.

ಯಾವುದೇ ಮುನ್ಸೂಚನೆ ಇಲ್ಲದೆ ಹಠಾತ್ ಆಗಿ ವಿಮಾನಗಳನ್ನು ರದ್ದುಪಡಿಸಿದ ಪರಿಣಾಮ ರೋಗಿಗಳು ಪರದಾಡಿದರು. ಪರೀಕ್ಷೆ ಹಾಗೂ ಸಂದರ್ಶನಕ್ಕಾಗಿ ಹೊರಟವರು ಅವಕಾಶ ವಂಚಿತರಾದರು. ಮೊಬೈಲ್ ಚಾರ್ಜ್ ಮಾಡಲು ಅರ್ಧ ಕಿಲೋಮೀಟರ್ ಉದ್ದದ ಸಾಲು, ಚಳಿಯಿಂದ ಪಾರಾಗಲು ಶೌಚಾಲಯದಲ್ಲಿ ಆಶ್ರಯ ಹೀಗೆ ಜನರು ಪಟ್ಟ ಪರದಾಟಗಳನ್ನು ಹಲವರು ಮಾಧ್ಯಮಗಳಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜನರ ಪರದಾಟ ಕಂಡು ಸುಪ್ರೀಂ ಕೋರ್ಟ್ ಕೂಡಾ ಮಧ್ಯಪ್ರವೇಶಿಸಿದೆ. ಸಂಸತ್ನಲ್ಲೂ ಇದು ಪ್ರತಿಧ್ವನಿಸಿತು. ಇಂಡಿಗೊ ಏಕಸ್ವಾಮ್ಯತೆ ಮತ್ತು ಜನರ ಪರದಾಟಗಳ ಕುರಿತು ಹಲವು ನೆಟ್ಟಿಗರೇ ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಮಾಡಿದ್ದಾರೆ.

ವಿರೋಧ ಪಕ್ಷಗಳು ಕಿಡಿ ಕಾರಿವೆ, ಲೆಕ್ಕ ಪರಿಶೋಧಕರ ಸಂಘವು ‘ಯೋಜನೆಯ ವೈಫಲ್ಯ’ ಎಂದಿದೆ, ಉದ್ಯಮದ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಶೇ 65.6ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಇಂಡಿಗೊ ಭಾರತದಲ್ಲಿ ಮುಂಚೂಣಿಯಲ್ಲಿರುವ ವಿಮಾನಯಾನ ಸಂಸ್ಥೆ. ಇದರ ಸಮೀಪದ ಪ್ರತಿಸ್ಪರ್ಧಿ ಏರ್ ಇಂಡಿಯಾ. ಅದರ ಪಾಲು ಶೇ 25.7ರಷ್ಟು ಮಾತ್ರ. ಕೇವಲ ಎರಡು ಕಂಪನಿಗಳು ಬಹುದೊಡ್ಡ ಪಾಲು ಹೊಂದಿರುವುದನ್ನು ಹಲವರು ‘ದ್ವಿಸ್ವಾಮ್ಯ’ ಎಂದೂ ಕರೆದಿದ್ದಾರೆ. ಯಾವುದೇ ಉದ್ಯಮದಲ್ಲಿ ಸ್ಪರ್ಧೆಯೇ ಇಲ್ಲ ಎಂದಾದರೆ ಅಲ್ಲಿ ಗ್ರಾಹಕರು ಅಧಿಕ ಹಣ ನೀಡಬೇಕಾದ್ದು, ಕನಿಷ್ಠ ಸೌಲಭ್ಯ ಮತ್ತು ಅಪಾಯಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಗಳು ಸಾಮಾನ್ಯ ಎಂದು ಹಲವರು ವಿಶ್ಲೇಷಿಸಿದ್ದಾರೆ.

ಇಡೀ ಮಾರುಕಟ್ಟೆ ಒಬ್ಬರ ಹಿಡಿತಕ್ಕೆ ಸೇರಿ ಅಥವಾ ಒಂದೇ ಕಡೆ ಹೂಡಿಕೆಯಾಗುತ್ತಿರುವುದೇ ಇಂಡಿಗೊ ಸಮಸ್ಯೆಯಂತ ಪರಿಸ್ಥಿತಿ ಸೃಷ್ಟಿಗೆ ಕಾರಣ. ಏಕಸ್ವಾಮ್ಯತೆ ಎಂಬುದು ಸ್ಪರ್ಧೆಯನ್ನು ಕೊಲ್ಲುತ್ತದೆ. ಇಂಥ ಪರಿಸ್ಥಿತಿ ಎದುರಾಗದಂತೆ ಸರ್ಕಾರವೇ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನಾ ಯುಬಿಟಿಯ ನಾಐಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

‘ಹೆಚ್ಚು ವಿಮಾನಯಾನ ಸಂಸ್ಥೆಗಳು ಈ ಉದ್ದಿಮೆ ಪ್ರವೇಶಿಸುವಂತೆ ನೀತಿ ರೂಪಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ ಮೋಹನ ನಾಯ್ಡು ಹೇಳಿದ್ದಾರಾದರೂ ಆ ನೀತಿ ಏನು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಈ ಕ್ಷೇತ್ರದಲ್ಲಿ ಇನ್ನೂ ಐದು ಕಂಪನಿಗಳ ಪ್ರವೇಶಕ್ಕೆ ಸ್ಥಳಾವಕಾಶ ಇದೆ’ ಎಂದು ಉದ್ದಿಮೆಯ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಮಧ್ಯಮ ವರ್ಗ ಮತ್ತು ದೇಶದ ಆರ್ಥಿಕತೆ ಸೃಷ್ಟಿಗೆ ನಾಗರಿಕ ವಿಮಾನಯಾನದ ತ್ವರಿತ ಬೆಳವಣಿಗೆ ಸಹಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 2014ರಿಂದ ವಿಮಾನ ನಿಲ್ದಾಣಗಳ ಸಂಖ್ಯೆ ದೇಶದಲ್ಲಿ ದ್ವಿಗುಣಗೊಂಡಿದೆ ಎಂದೂ ಕೇಂದ್ರ ಬೆನ್ನು ತಟ್ಟಿಕೊಂಡಿದೆ. ಪ್ರಯಾಣಿಕರ ಸಂಖ್ಯೆ ವಾರ್ಷಿಕ ಶೇ 10ರಿಂದ 12ರಷ್ಟು ಹೆಚ್ಚಾಗಿದೆ ಎಂದೂ ಕೇಂದ್ರ ಸರ್ಕಾರ ಹೇಳಿದೆ.

ಒಂದು ಕಾಲದಲ್ಲಿ ಒಟ್ಟು ಒಂಬತ್ತು ವಿಮಾನಯಾನ ಸಂಸ್ಥೆಗಳು ಭಾರತದಲ್ಲಿದ್ದವು. ಕಿಂಗ್ಫಿಷರ್, ಸ್ಪೈಸ್ಜೆಟ್, ಜೆಟ್ ಏರ್ವೇಸ್, ಗೋಏರ್ ಸೇರಿದಂತೆ 2012ರಿಂದ 2023ರವರೆಗೆ ಈ ಎಲ್ಲಾ ಕಂಪನಿಗಳ ವಿಮಾನಗಳು ಭಾರತದ ಆಗಸದಲ್ಲಿ ಹಾರಾಡುತ್ತಿದ್ದವು. ಆಗ ಇಂಡಿಗೊ ಪಾಲು ಶೇ 36.8ರಷ್ಟಿತ್ತು. ಕಾಲ ಉರುಳಿದಂತೆ ಕೆಲವೊಂದು ಕಾರಣಗಳಿಂದ ಕೆಲ ಕಂಪನಿಗಳು ನಷ್ಟದ ಹಾದಿ ಹಿಡಿದು ಮರೆಯಾದವು. ಇದರಿಂದ ಇಂಡಿಗೊ ಬೆಳವಣಿಗೆಯ ಹಾದಿ ಸುಗಮವಾಯಿತು ಎಂದು ಉದ್ಯಮದ ಪಂಡಿತರು ವಿಶ್ಲೇಷಿಸಿದ್ದಾರೆ.
.IndiGo Crisis: ಗ್ರಾಹಕರಿಗೆ ₹ 569 ಕೋಟಿ ಮರುಪಾವತಿ ಮಾಡಿದ ಇಂಡಿಗೊ.IndiGo Crisis: ಇಂಡಿಗೊಗೆ ಪೆಟ್ಟು; ಶೇ 5ರಷ್ಟು ವಿಮಾನಯಾನ ಕಡಿತಗೊಳಿಸಿದ DGCA.
ವಿವಿಧ ಉದ್ಯಮಗಳಲ್ಲಿ ಹೇಗಿದೆ ಮಾರುಕಟ್ಟೆ ಹಿಡಿತ

ವಿಮಾನಯಾನ ಉದ್ಯಮದಲ್ಲಿ ಇಂಡಿಗೊ ಪಾಲು ಶೇ 65ರಷ್ಟಾದರೆ ಇತರ ಉದ್ಯಮಗಳಲ್ಲೂ ಹಲವು ಕಂಪನಿಗಳು ಸಿಂಹ ಪಾಲು ಹೊಂದಿವೆ. ಉದಾಹರಣೆಗೆ ದೂರಸಂಪರ್ಕ ಕ್ಷೇತ್ರದಲ್ಲಿ ರಿಲಯ್ಸ್ ಜಿಯೊ ಶೇ 40.7ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಬಂದರು ಕ್ಷೇತ್ರದಲ್ಲಿ ಅದಾನಿ ಸಮೂಹದ ಪಾಲು ಶೇ 20ರಷ್ಟಿದೆ. ಸರ್ಕಾರದ ನಂತರದಲ್ಲಿ 2ನೇ ಸ್ಥಾನದಲ್ಲಿ ಅದಾನಿ ಸಮೂಹವಿದೆ. ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲೂ ಅದಾನಿ ಸಮೂಹದ ಪಾಲು ಶೇ 23ರಷ್ಟು.

ಹೀಗೆ ರಿಲಯನ್ಸ್, ಟಾಟಾ ಸಮೂಹ, ಆದಿತ್ಯ ಬಿರ್ಲಾ ಸಮೂಹ, ಅದಾನಿ ಮತ್ತು ಭಾರ್ತಿ ಟೆಲಿಕಾಂ ಕಂಪನಿಗಳು 1991ರಲ್ಲಿ ಶೇ 10ರಷ್ಟು ಹಣಕಾಸೇತರ ಪಾಲನ್ನು ಹೊಂದಿದ್ದವು. 2021ರ ಹೊತ್ತಿಗೆ ಇದು ಶೇ 18ಕ್ಕೆ ಏರಿಕೆಯಾಗಿದೆ ಎಂಬುದೂ ವರದಿಯಾಗಿದೆ.

ವಿಮಾನಗಳ ರದ್ದುಪಡಿಸಿ ಸಾರ್ವಜನಿಕರಿಗೆ ಆಗಿರುವ ತೊಂದರೆಗಳಿಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಶೇ 10ರಷ್ಟು ವಿಮಾನಗಳನ್ನು ಕಡಿತಗೊಳಿಸಿ ಶಿಕ್ಷೆ ವಿಧಿಸಿದೆ. ಆದರೆ ಇದೇ ಹೊತ್ತಿನಲ್ಲಿ ಈ ಏಕಸ್ವಾಮ್ಯ ಅಥವಾ ದ್ವಿಸ್ವಾಮ್ಯವನ್ನು ತಡೆಯುವುದು ಹೇಗೆ ಎಂಬ ಚರ್ಚೆಗಳೂ ಹಲವು ವೇದಿಕೆಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.