ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ದಾವಣಗೆರೆ ಹಾಗೂ ಧಾರವಾಡದಲ್ಲಿ ತಲಾ ಒಬ್ಬರು ಡೆಂಗಿಯಿಂದ ಮರಣ ಹೊಂದಿರುವುದು ಖಚಿತಪಟ್ಟಿದೆ. ರಾಜ್ಯದ ಕೆಲವೆಡೆ ಡೆಂಗಿ ಶಂಕಿತ ಮರಣ ಪ್ರಕರಣಗಳು ವರದಿಯಾದರೂ, ಈ ಪ್ರಕರಣಗಳ ‘ಸಾವಿನ ಲೆಕ್ಕಗಳ ವರದಿ’ (ಡೆತ್ ಆಡಿಟ್) ಸಿದ್ಧಗೊಂಡು, ಇಲಾಖೆಗೆ ಸಲ್ಲಿಕೆಯಾದ ಬಳಿಕ ಅಧಿಕೃತವಾಗಿ ಘೋಷಿಸಲಾಗುತ್ತಿದೆ.