ಬೆಂಗಳೂರು: ಮತ್ತಿಕೆರೆಯ ಜಯಪ್ರಕಾಶ್ ನಾರಾಯಣ ಉದ್ಯಾನದಲ್ಲಿ ಭಾನುವಾರ ನಡೆದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಆರ್.ಆರ್. ನಗರ ಶಾಸಕ ಮುನಿರತ್ನ ನಡುವೆ ವಾಗ್ವಾದಕ್ಕೆ, ಪ್ರಹಸನಗಳಿಗೆ ಕಾರಣವಾಯಿತು.

ಕಾರ್ಯಕ್ರಮಕ್ಕೆ ಆರ್ಎಸ್ಎಸ್ ಟೋಪಿ ಧರಿಸಿ ಬಂದಿದ್ದ ಮುನಿರತ್ನ ಅವರು ಪ್ರೇಕ್ಷಕರ ಸಾಲಿನಲ್ಲಿ ಹಾಜರಿದ್ದರು. ವೇದಿಕೆಯಲ್ಲಿದ್ದ ಡಿ.ಕೆ. ಶಿವಕುಮಾರ್ ಅವರು ‘ಏಯ್ ಎಂಎಲ್ಎ ಅವರೇ ಬನ್ರಿ ಈ ಕಡೆ... ರೀ ಕರಿಟೋಪಿ ಎಂಎಲ್ಎ ಈ ಕಡೆ ಬಾರಪ್ಪ. ಹೊಸದಾಗಿ ಕರಿಟೋಪಿ ಹಾಕ್ಕೊಂಡಿದ್ದಾರೆ’ ಎಂದು ಕರೆದರು.

ವೇದಿಕೆಯ ಮೇಲೆ ಬಂದ ಮುನಿರತ್ನ ಅವರು ‘ಒಂದೇ ನಿಮಿಷ ಮೈಕ್ ಕೊಡಿ’ ಎಂದು ಮೈಕ್ ತೆಗೆದುಕೊಂಡು, ‘ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಆದರೂ ಈ ನಗರದ ಪ್ರಜೆಯಾಗಿ ಬಂದು ನಿಮ್ಮ (ಜನರ) ಜೊತೆ ನಾನು ಕುಳಿತುಕೊಳ್ಳುತ್ತೇನೆ’ ಎಂದು ಹೇಳಿ ವೇದಿಕೆಯಿಂದ ಇಳಿಯಲು ಮುಂದಾದರು. ಮತ್ತೆ ವಾಪಸಾದ ಅವರು ಮಾತು ಮುಂದುವರಿಸಿದರು.

‘ಇದು ಸರ್ಕಾರದ ಕಾರ್ಯಕ್ರಮ. ಆದರೆ, ಸಂಸದರೂ ಇಲ್ಲ, ಶಾಸಕರೂ ಇಲ್ಲ. ಅವರ ಫೋಟೊ ಕೂಡಾ ಇಲ್ಲ. ಇದು ಸಾರ್ವಜನಿಕರ ಕುಂದು ಕೊರತೆಯ ಸಭೆಯೇ ಎಂಬುದು ಗೊತ್ತಿಲ್ಲ. ಇದು ಕಾಂಗ್ರೆಸ್ ಕಾರ್ಯಕ್ರಮ. ಇದು ಹೇಗೆ ಸಾರ್ವಜನಿಕ ಕಾರ್ಯಕ್ರಮ ಹೇಗಾಗುತ್ತದೆ’ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುನಿರತ್ನ ನಡುವೆ ವಾಗ್ವಾದಗಳಾದವು. ಆ ನಂತರ ಮುನಿರತ್ನ ಅವರು ಆರ್ಎಸ್ಎಸ್ ಟೋಪಿ ಹಾಕಿಕೊಂಡು, ಗಾಂಧೀಜಿಯ ಫೋಟೊ ಹಿಡಿದುಕೊಂಡು ವೇದಿಕೆಯ ಎದುರು ಕುಳಿತು ಮೌನ ಪ್ರತಿಭಟನೆ ನಡೆಸಿದರು.

ಪೊಲೀಸರು ಅವರನ್ನು ಕರೆದೊಯ್ಯಲು ಪ್ರಯತ್ನಿಸಿದಾಗ ನೂಕುನುಗ್ಗಲು ಉಂಟಾಯಿತು.

ಬಳಿಕ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಇಲ್ಲಿನ ಶಾಸಕರ ವರ್ತನೆ ನೋಡಿದಾಗ ಎಂಥ ಪರಿಸ್ಥಿತಿಯಲ್ಲಿ ನೀವಿದ್ದೀರಿ ಎಂಬುದು ಅರ್ಥವಾಗುತ್ತದೆ. ಮುನಿರತ್ನ ಅವರಿಗೆ ತಾಳ್ಮೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ್ಮ ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ನನಗೆ ಚನ್ನಾಗಿ ಗೊತ್ತಿದೆ. ಇದಕ್ಕೆಲ್ಲ ಸೂಕ್ತ ಸಮಯದಲ್ಲಿ ಉತ್ತರ ನೀಡಿ’ ಎಂದು ಹೇಳಿದರು.

ಮಾಟದಿಂದಾಗಿ ಸಿದ್ದರಾಮಯ್ಯ ಮಂಕು: ಮುನಿರತ್ನ

ಸಿದ್ದರಾಮಯ್ಯರ ಆಡಳಿತ ನಿರ್ಧಾರಗಳು ಹೇಗಿತ್ತು ಗೊತ್ತಾ? ಅವರ ವಿರುದ್ಧ ಮಾಟ ಮಂತ್ರ ಮಾಡಿ ಡಬ್ಬದಲ್ಲಿ ಹಾಕಿ ವಶೀಕರಣ ಮಾಡಿದ್ದಾರೆ. ಹಾಗಾಗಿ ಅವರು ಮಂಕಾಗಿದ್ದಾರೆ ಎಂದು ಶಾಸಕ ಮುನಿರತ್ನ ಅವರು ಡಿ.ಕೆ. ಸಹೋದರರ ಮೇಲೆ ಆರೋಪಿಸಿದ್ದಾರೆ. ರಸ್ತೆಯಲ್ಲಿ ಗುಂಡಿಬಿದ್ದರೂ ಕೇಳುತ್ತಿಲ್ಲ. ಬೆಂಗಳೂರಿನಿಂದ ಹೊರಗೆ ಹೋಗುತ್ತಿಲ್ಲ. ಯಾರು ಸತ್ತರೂ ಕೇಳುತ್ತಿಲ್ಲ. ಇದಕ್ಕೆಲ್ಲ ಮಾಟಮಂತ್ರವೇ ಕಾರಣ ಎಂದರು. ಹನಿಟ್ರ್ಯಾಪ್ ಮಾಡಿ ಹಾಳು ಮಾಡುವುದು. ಇಲ್ಲವೇ ಕೇರಳಕ್ಕೆ ಹೋಗಿ ಮಂತ್ರವಾದಿಗಳನ್ನು ಹಿಡಿದು ಕೋಣವೋ ಕಾಡು ಹಂದಿಯನ್ನೋ ಬಲಿಕೊಡುವುದು ನಡೆದಿದೆ. ಎಚ್.ಡಿ. ಕುಮಾರಸ್ವಾಮಿಗೂ ಇದನ್ನೇ ಮಾಡಿದ್ದಾರೆ. ಅದಕ್ಕಾಗಿಯೇ ಅವರ ಆರೋಗ್ಯ ಸರಿ ಇಲ್ಲ ಎಂದು ಆರೋಪಿಸಿದರು.

ಆರ್ಎಸ್ಎಸ್ಗೆ ಅವಮಾನ ಮಾಡಿದ ಶಾಸಕ: ಡಿಕೆಶಿ

‘ಆರ್ಎಸ್ಎಸ್ಗೆ ಅದರದ್ದೇ ಆದ ಇತಿಹಾಸವಿದೆ. ಆ ಸಂಸ್ಥೆಯ ಟೋಪಿ ಸಮವಸ್ತ್ರ ಧರಿಸಿಕೊಂಡು ಈ ಕಾರ್ಯಕ್ರಮಕ್ಕೆ ಬರುವ ಅವಶ್ಯಕತೆ ಏನಿತ್ತು? ಇದು ನನಗಲ್ಲ ಆರ್ಎಸ್ಎಸ್ಗೆ ಮಾಡಿದ ಅವಮಾನ’ ಎಂದು ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ‘ಇದು ಯಾವುದೇ ಶಿಲಾನ್ಯಾಸ ಕಾರ್ಯಕ್ರಮವಲ್ಲ. ಎಲ್ಲ ಸಾರ್ವಜನಿಕರಿಗೂ ಮುಕ್ತ ಆಹ್ವಾನವಿದ್ದ ಕಾರ್ಯಕ್ರಮ. ಜನರ ಸಮಸ್ಯೆಗಳನ್ನು ಅರಿಯುವ ಕಾರ್ಯಕ್ರಮ. ಜನಪ್ರತಿನಿಧಿಗೆ ಏನು ಗೌರವ ನೀಡಬೇಕೊ ಅದನ್ನು ನೀಡುತ್ತೇವೆ’ ಎಂದು ತಿಳಿಸಿದರು. ‘ಶಾಸಕರನ್ನು ನಾಗರಿಕರೇ ಹೊಡೆದು ಓಡಿಸುತ್ತಿದ್ದರು. ಅವರ ವರ್ತನೆಯಿಂದ ಜನಕ್ಕೆ ಅಷ್ಟು ರೋಷ ಬಂದಿತ್ತು’ ಎಂದರು. ಡಿ.ಕೆ.ಸುರೇಶ್ ಸೋಲಿನ ನಂತರ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ ಎನ್ನುವ ಆರೋಪದ ಬಗ್ಗೆ ‘ಅದಕ್ಕೆಲ್ಲ ತನಿಖೆ ನಡೆಸಲು ಸಂಸ್ಥೆಗಳಿವೆ. ಅಲ್ಲಿಗೆ ಹೋಗಿ ದೂರು ನೀಡಲಿ’ ಎಂದು ಸಲಹೆ ನೀಡಿದರು.

ಮತದಾರರಿಗೆ ಮಾಡಿದ ಅಪಮಾನ: ವಿಜಯೇಂದ್ರ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಡಿದ ಅಪಮಾನವು ಮುನಿರತ್ನ ಅವರಿಗೆ ಮಾಡಿದ ಅಪಮಾನವಲ್ಲ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಂಬರುವ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಕರಿಟೋಪಿಯ ಬೆಲೆ ಏನೆಂದು ತೋರಿಸುತ್ತೇವೆ. ಒಬ್ಬ ಉಪಮುಖ್ಯಮಂತ್ರಿ, ಜವಾಬ್ದಾರಿಯುತ ಸಚಿವ ರಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಒಬ್ಬ ಜನಪ್ರತಿನಿಧಿಯ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಸೌಜನ್ಯವೂ ಶಿವಕುಮಾರ್ ಅವರಿಗೆ ಇಲ್ಲ’ ಎಂದು ಆಕ್ಷೇಪಿಸಿದರು.

‘ಅಧಿಕಾರ ಎಂಬುದು ಶಾಶ್ವತ ಅಲ್ಲ; ಡಿ.ಕೆ.ಶಿವಕುಮಾರ್ ಅವರ ನಡವಳಿಕೆ, ಮಾತಿನ ಧಾಟಿ, ಒಬ್ಬ ಚುನಾಯಿತ ಪ್ರತಿನಿಧಿಗೆ ಮಾಡಿದ ಅಪಮಾನದ ವಿರುದ್ಧ ಸಾರ್ವಜನಿಕರು ಮಾತನಾಡುತ್ತಿದ್ದಾರೆ’ ಎಂದು ನುಡಿದರು.

ಸಭ್ಯತೆಯ ಪಾಠ ಮರೆತ ಡಿಕೆಶಿ: ‘ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕವಾಗಿ ಶಾಸಕ ಮುನಿರತ್ನ ಅವರನ್ನು ಸಭ್ಯತೆಯಿಂದ ನಡೆಸಿಕೊಂಡಿಲ್ಲ. ಮುನಿರತ್ನ ಅವರನ್ನು ಕರೆದಿರುವ ರೀತಿಯೂ ಸರಿಯಾಗಿಲ್ಲ. ಅವರು ಸಭ್ಯತೆಯ ಪಾಠವನ್ನು ಮರೆತಿದ್ದಾರೆ’ ಎಂದು ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಸಿ.ಟಿ.ರವಿ ಟೀಕಿಸಿದರು.

‘ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದ್ದರೆ ನಮ್ಮ ಆಕ್ಷೇಪಣೆ ಇಲ್ಲ. ಪಕ್ಷದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸುವುದಿಲ್ಲ. ಅಲ್ಲಿ ನಡೆದದ್ದು ಸರ್ಕಾರದ ಕಾರ್ಯಕ್ರಮವೇ ಪಕ್ಷದ ಕಾರ್ಯಕ್ರಮವೇ’ ಎಂದು ರವಿ ಪ್ರಶ್ನಿಸಿದರು.

‘ಸರ್ಕಾರಿ ಕಾರ್ಯಕ್ರಮವಾಗಿದ್ದರೆ ಅದರಲ್ಲಿ ಭಾಗವಹಿಸುವುದು ಶಾಸಕರಾದ ಮುನಿರತ್ನ ಅವರ ಹಕ್ಕು. ಸರ್ಕಾರದ ಕಾರ್ಯಕ್ರಮಕ್ಕೆ ಆಮಂತ್ರಿಸಿಲ್ಲವಾದರೆ ಅದು ಅಪರಾಧ ಮತ್ತು ಹಕ್ಕುಚ್ಯುತಿ ಆಗುತ್ತದೆ. ಯಾರು ಪ್ರಜಾ
ಪ್ರಭುತ್ವದ ಮೌಲ್ಯವನ್ನು ಅಳವಡಿಸಿಕೊಂಡಿದ್ದಾರೋ ಅವರಿಗೆ ಜನಪ್ರತಿನಿಧಿಯ ಭಾವನೆಗಳು ಆರ್ಥವಾಗುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.