ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪತ್ನಿ, ಮಗಳ ಮೇಲೆ ಕಾದ ಎಣ್ಣೆ ಸುರಿದಿದ್ದ

Last Updated 3 ಫೆಬ್ರುವರಿ 2022, 16:51 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿ ಹಾಗೂ ಮಗಳ ಮೇಲೆ ಕಾದ ಎಣ್ಣೆ ಸುರಿದಿದ್ದ ಆರೋಪಿ ಥಾಮಸ್ ಎಂಬಾತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

‘ಎಲ್‌.ಆರ್‌. ನಗರದ ನಿವಾಸಿ ಥಾಮಸ್, ಜ. 30ರಂದು ಕೃತ್ಯ ಎಸಗಿ ಪರಾರಿಯಾಗಿದ್ದ. ಘಟನೆಯಲ್ಲಿ ಗಾಯಗೊಂಡಿದ್ದ ಆತನ ಪತ್ನಿ ಅಂಥೋಣಿಯಮ್ಮ ಹಾಗೂ ಮಗಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

’ಮದ್ಯವ್ಯಸನಿ ಆಗಿದ್ದ ಥಾಮಸ್, ನಿತ್ಯವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಪತ್ನಿಯ ಶೀಲ ಶಂಕಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಹಲ್ಲೆಯನ್ನೂ ಮಾಡುತ್ತಿದ್ದ.’

‘ಜ. 30ರಂದು ಮಧ್ಯಾಹ್ನ ಪತ್ನಿ ಅಂಥೋಣಿಯಮ್ಮ ಮೇಲೆ ಹಲ್ಲೆ ಮಾಡಿದ್ದ ಆರೋಪಿ, ಅವರ ಮೈ ಮೇಲೆ ಕಾದ ಎಣ್ಣೆ ಸುರಿದಿದ್ದ. ಬಿಡಿಸಲು ಬಂದ 13 ವರ್ಷದ ಮಗಳ ಮೇಲೂ ಎಣ್ಣೆ ಎರಚಿದ್ದ. ಅಂಥೋನಿಯಮ್ಮ ಅವರ ಮುಖ, ಎದೆ ಹಾಗೂ ಕೈ-ಕಾಲುಗಳಿಗೆ ಸುಟ್ಟ ಗಾಯವಾಗಿದೆ. ಮಗಳ ಮುಖ ಹಾಗೂ ಕೈ–ಕಾಲಿಗೂ ಗಾಯವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT