ಸೋಮವಾರ, ಆಗಸ್ಟ್ 8, 2022
23 °C

ದೇವರ ಪ್ರಸಾದವೆಂದು ಡ್ರಗ್ಸ್ ಸಾಗಣೆ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾದಕ ವಸ್ತು ಬ್ರೌನ್‌ ಶುಗರ್ ಸಾಗಣೆ ಮಾಡುತ್ತಿದ್ದ ಆರೋಪದಡಿ ವಿಕ್ರಮ್ ಖಿಲೇರಿ (25) ಎಂಬಾತನನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

‘ಗಿರಿನಗರದ ವಿಕ್ರಮ್, ಪಟ್ನೂಲ್ ಪೇಟೆಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಭಾತ್ಮಿದಾರರು ನೀಡಿದ್ದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಯಿತು. 90 ಗ್ರಾಂ ಬ್ರೌನ್ ಶುಗರ್, ಮೊಬೈಲ್, ಬೈಕ್‌ ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

‘ಪೊಲೀಸರು ಸ್ಥಳಕ್ಕೆ ಹೋದಾಗ ಆರೋಪಿ ಬಳಿ ಯಾವುದೇ ಡ್ರಗ್ಸ್ ಸಿಕ್ಕಿರಲಿಲ್ಲ. ಆತನ ಹೆಲ್ಮೆಟ್‌ ಪರಿಶೀಲಿಸಿದಾಗ ಅದರಲ್ಲಿ ಡ್ರಗ್ಸ್ ಪತ್ತೆಯಾಯಿತು. ಬೆಂಗಳೂರು ಮಾತ್ರವಲ್ಲದೇ ಹಲವು ನಗರಗಳಿಗೆ ಆರೋಪಿ ಬ್ರೌನ್ ಶುಗರ್ ಪೂರೈಸುತ್ತಿದ್ದ ಮಾಹಿತಿ ಇದೆ.’

‘ಡ್ರಗ್ಸ್ ಪೊಟ್ಟಣದಲ್ಲಿ ತುಂಬುತ್ತಿದ್ದ ಆರೋಪಿ, ಅದರ ಮೇಲೆ ದೇವರ ಭಾವಚಿತ್ರ ಅಂಟಿಸುತ್ತಿದ್ದ. ದೇವರ ಪ್ರಸಾದವೆಂದು ಹೇಳಿ ಬಸ್ ಹಾಗೂ ವಿವಿಧ ಕಂಪನಿಗಳ ಮೂಲಕ ಕೋರಿಯರ್‌ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಅವರು ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು