ಬೆಂಗಳೂರು: ಮದ್ಯಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಶುಕ್ರವಾರ ಒಂದೇ ದಿನ 779 ಪ್ರಕರಣ ದಾಖಲಿಸಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಪ್ರತಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಪಾನಮತ್ತ ಚಾಲನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ.
ಶುಕ್ರವಾರ ಕಾರ್ಯಾಚರಣೆ ನಡೆಸಿದ 1,200 ಅಧಿಕಾರಿಗಳು, ಸಿಬ್ಬಂದಿ, 34,676 ವಾಹನಗಳ ತಪಾಸಣೆ ನಡೆಸಿ, 779 ಪ್ರಕರಣ ದಾಖಲಿಸಿದ್ದಾರೆ. ವಾಹನಗಳನ್ನು ವಶಕ್ಕೆ ಪಡೆದು, ನೋಟಿಸ್ ನೀಡಿ ಕಳುಹಿಸಿದ್ದಾರೆ. ಚಾಲನಾ ಪರವಾನಗಿ ಅಮಾನತಿಗೆ ಸಂಬಂಧಪಟ್ಟವರಿಗೆ ಶಿಫಾರಸು ಮಾಡಿದ್ದಾರೆ.