ರಾಜರಾಜೇಶ್ವರಿ ನಗರ: ‘ದೇವಾಲಯಗಳಿಗಿಂತ ಹೆಚ್ಚಾಗಿ ವಿದ್ಯಾಲಯಗಳನ್ನು ಸ್ಥಾಪಿಸುವ ಮೂಲಕ ಸುಶಿಕ್ಷಿತರನ್ನಾಗಿ ಮಾಡುವ ಕೆಲಸದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು’ ಎಂದು ಎಂದು ಕಾಗಿನೆಲೆ ಹೊಸದುರ್ಗ ಕನಕ ಗುರು ಪೀಠಾಧ್ಯಕ್ಷ ಈಶ್ವರಾನಂದ ಸ್ವಾಮೀಜಿ ಹೇಳಿದರು.

ಎಚ್. ಗೊಲ್ಲಹಳ್ಳಿ ಬಳಿಯ ದಾಸಯ್ಯನ ಗುಟ್ಟೆ ಕನಕಗಿರಿ ಕ್ಷೇತ್ರದಲ್ಲಿ ಕುಂದೂರು ಬೀರೇಶ್ವರ ಸ್ವಾಮಿ ದೇವಸ್ಥಾನದ ಕಟ್ಟಡ ಕಾಮಗಾರಿಗೆ ಶಂಕು ಪನೆ ನೆರವೇರಿಸಿ ಮಾತನಾಡಿದ ಅವರು, ‘ಶಿಕ್ಷಣದಿಂದ ಜ್ಞಾನ, ವ್ಯಕ್ತಿತ್ವ, ಮಾನವೀಯತೆ, ಸಂಸ್ಕಾರ, ಭಕ್ತಿ ಮಾರ್ಗದಲ್ಲಿ ಸಾಗಬಹುದು. ತಳ ಸಮುದಾಯ, ಹಿಂದುಳಿದ, ದಲಿತ, ರೈತ, ಹಾಗೂ ಶೋಷಿತ ಸಮುದಾಯಗಳು ಮೂಢನಂಬಿಕೆ, ಮೌಢ್ಯ, ಕಂದಾಚಾರ್ಯಗಳಿಂದ ದೂರ ಸರಿದು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಭಗವಂತನನ್ನು ಕಾಣಬೇಕಾಗಿದೆ’ ಎಂದರು.

ಕನಕದಾಸರ ಪ್ರತಿಮೆಯನ್ನು ಜನಾರ್ಪಣೆ ಮಾಡಿದ ಶಾಸಕ ಎಸ್. ಟಿ. ಸೋಮಶೇಖರ್, ‘ಪೂರ್ವಿಕರು, ಹಿರಿಯರು, ಪೂಜಿಸಿಕೊಂಡು ಬರುತ್ತಿರುವ ಇತಿಹಾಸವುಳ್ಳ ದೇವರನ್ನು ಅಭಿವೃದ್ಧಿ, ಜೀರ್ಣೋದ್ಧಾರ ಮಾಡಬೇಕು. ಆ ಮೂಲಕ ನಮ್ಮ ಧಾರ್ಮಿಕ ಸಂಸ್ಕೃತಿ ಮತ್ತಷ್ಟು ಶ್ರೀಮಂತಗೊಳಿಸಬೇಕು’ ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಆರ್. ಶಿವಮಾದಯ್ಯ ದೇವಾಲಯದ ಹೆಬ್ಬಾಗಿಲು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವೆಂಕಟೇಶ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಈರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಕ್ಕ ರಾಜು, ಕುರುಬರ ಸಂಘದ ನಿರ್ದೇಶಕ ಟಿ.ಬಿ. ಬೆಳಗಾವಿ, ಕರವೇ ಉಪಾಧ್ಯಕ್ಷ ಕೆ. ಸಿ. ಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.