ಬೆಂಗಳೂರು: ಸರ್.ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೋಮವಾರ 2025-26ನೇ ಸಾಲಿನ ಶೈಕ್ಷಣಿಕ ತರಗತಿಗಳನ್ನು ಉದ್ಘಾಟಿಸುವ ಮೂಲಕ ನಗರದ ಸಿಎಂಆರ್ ವಿಶ್ವವಿದ್ಯಾಲಯವು ಎಂಜಿನಿಯರ್ಗಳ ದಿನ ಆಚರಿಸಿತು.

ಬಾಗಲೂರಿನ ಕ್ಯಾಂಪಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿಭಾಗಗಳಿಗೆ ಪ್ರವೇಶಾತಿ ಪಡೆದ 750ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶೈಕ್ಷಣಿಕ ವರ್ಷಕ್ಕೆ ಬರ ಮಾಡಿಕೊಳ್ಳಲಾಯಿತು.

ಸಿಎಂಆರ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಗುಣಾತ್ಮಕ ಮತ್ತು ಸೃಜನಾತ್ಮಕ ಕಲಿಕೆಗೆ ಪೂರಕವಾದ ಪರಿಸರವನ್ನು ಹೊಂದಿದೆ. ಅತ್ಯಾಧುನಿಕ ಕಲಿಕಾ ಸೌಲಭ್ಯ, ಅನುಭವಿ ಅಧ್ಯಾಪಕರು, ಸ್ಪರ್ಧಾತ್ಮಕ ಮನೋಭಾವದ ವಿದ್ಯಾರ್ಥಿಗಳ ಸಮುದಾಯವನ್ನು ಹೊಂದಿದ್ದು ದೇಶಕ್ಕೆ ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ನೀಡಲು ಬದ್ಧವಾಗಿದೆ ಎಂದು ಸಿಎಂಆರ್ ವಿ.ವಿ ಕುಲಪತಿ ಡಾ.ಎಚ್.ಬಿ.ರಾಘವೇಂದ್ರ ತಿಳಿಸಿದರು.

ಧನ್ವಂತರಿ ಡ್ರೋನ್ ಪೈಲಟ್ ಅಕಾಡೆಮಿ ಸ್ಥಾಪಕ ನಿರ್ದೇಶಕ ಡಾ.ಎ.ಟಿ.ಕಿಶೋರ್ ಮಾತನಾಡಿ, ಅತ್ಯಾಧುನಿಕ ಕೃಷಿಯಲ್ಲಿ ಬಳಕೆಯಾಗುತ್ತಿರುವ ಡ್ರೋನ್ಗಳು ಮತ್ತು ರೊಬೊಟಿಕ್ಸ್ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಅದರ ಕಾರ್ಯನಿರ್ವಹಣೆಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

ಸೆಮಿಕಾನ್ ಡಿಸೈನ್ ಸಂಸ್ಥಾಪಕ ಮತ್ತು ಸಿಇಒ ಜಾರ್ಜ್ ಜಾಕೋಬ್, ಡೀಪ್ ಟೆಕ್ ಮತ್ತು ಎಂಜಿನಿಯರಿಂಗ್ ಎಕ್ಸಲೆನ್ಸ್; ಡ್ರೈವಿಂಗ್ ಇಂಡಿಯಾಸ್ ಟೆಕ್ ಏಡ್ ಎಂಬ ವಿಷಯ ಕುರಿತು ಮಾತನಾಡಿದರು.

ಸಹ ಕುಲಪತಿ ಡಾ.ಆರ್.ಪ್ರವೀಣ್, ಕುಲಸಚಿವ ಡಾ.ಎಂ.ಧನಂಜಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.