ಬುಧವಾರ, ಅಕ್ಟೋಬರ್ 28, 2020
28 °C
ರಾಜ್ಯ ಸರ್ಕಾರಗಳ ನಡೆಗೆ ನಿವೃತ್ತ ಐಎಎಸ್ ಅಧಿಕಾರಿ ಎಸ್‌.ಎಂ. ಜಾಮದಾರ್ ಬೇಸರ

ಹಿಂದಿ ಹೇರಿಕೆ ವಿರೋಧಿಸದ ಕಾರಣ ಕನ್ನಡಕ್ಕೆ ದುಃಸ್ಥಿತಿ: ಎಸ್‌.ಎಂ. ಜಾಮದಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸ್ವಾತಂತ್ರ್ಯ ಬಂದಾಗಿನಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳು ಹಿಂದಿಯನ್ನು ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಾ ಬಂದಿವೆ. ಇದನ್ನು ಧಿಕ್ಕರಿಸುವ ಧೈರ್ಯವನ್ನು ರಾಜ್ಯ ಸರ್ಕಾರಗಳು ತೋರದ ಪರಿಣಾಮವೇ ಕನ್ನಡ ಕಡೆಗಣನೆಯಾಗುವ ಸ್ಥಿತಿಗೆ ತಲುಪಿದ್ದೇವೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್‌.ಎಮ್‌. ಜಾಮದಾರ್ ಬೇಸರ ವ್ಯಕ್ತಪಡಿಸಿದರು. 

ಅಕವಿ ಸಂಸ್ಥೆಯು ಆನ್‌ಲೈನ್‌ ಮೂಲಕ ಭಾನುವಾರ ನಡೆಸಿದ 160ನೇ ಸಭೆಯಲ್ಲಿ ‘ಹಿಂದಿ ಹೇರಿಕೆ ಮತ್ತು ತಾಯಿ ನುಡಿ’ ಎಂಬ ವಿಷಯ ಮೇಲೆ ಅವರು ಮಾತನಾಡಿದರು.

‘ಹಿಂದಿ ಭಾಷೆಯನ್ನು ಹೇರುವ ಪ್ರಯತ್ನಕ್ಕೆ ಸುದೀರ್ಘ ಇತಿಹಾಸವೇ ಇದೆ. ಗಾಂಧೀಜಿ ಒಳಗೊಂಡಂತೆ ಹಲವು ಮಹಾನ್ ನಾಯಕರು ಹಿಂದಿ ಹೇರಿಕೆಗೆ ಕೈಜೋಡಿಸಿದ್ದರು. ರಾಷ್ಟ್ರದಲ್ಲಿ ಶೇ 34 ರಷ್ಟು ಮಂದಿ ಮಾತ್ರ ಹಿಂದಿ ಬಳಸುತ್ತಾರೆ. ಶೇ 66 ರಷ್ಟು ಮಂದಿಯ ಭಾಷೆ ಬೇರೆಯದು. ಹಾಗಾಗಿ ಹಿಂದಿ ಯಾವುದೇ ಕಾರಣಕ್ಕೂ ರಾಷ್ಟ್ರ ಭಾಷೆ ಆಗಲಾರದು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು